ಬರೇಲಿ : ಜಿಪಿಎಸ್ ನೇವಿಗೇಷನ್ ನಿರ್ದೇಶನ ಬಳಸಿ ಚಾಲನೆ ಮಾಡುತ್ತಿದ್ದ ಕಾರೊಂದು ದಾರಿ ತಪ್ಪಿ ರಾಮಗಂಗಾ ನದಿಗೆ ಬಿದ್ದು ಮೂರು ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು (ಭಾನುವಾರ) ಬೆಳಿಗ್ಗೆ 10 ಗಂಟೆ ಸುಮಾರಿಗೆ ಖಲ್ಪುರ್-ದತಗಂಜ್ ರಸ್ತೆ ಬಳಿ ಈ ಅವಘಡ ಸಂಭವಿಸಿದೆ.