ಜೆರುಸಲೇಂ: ಲೆಬನಾನ್ ಜೊತೆಗೆ ಕದನ ವಿರಾಮ ಒಪ್ಪಂದಕ್ಕೆ ಬರುವುದು 'ಅತಿ ದೊಡ್ಡ ತಪ್ಪು' ಎಂದು ಇಸ್ರೇಲ್ ಬಲಪಂಥೀಯ ರಾಷ್ಟ್ರೀಯ ಭದ್ರತಾ ಸಚಿವ ಇಟಮಾನ್ ಬೆನ್ ಗಿವಿಯರ್ ಸೋಮವಾರ ಹೇಳಿದ್ದಾರೆ.
'ಲೆಬನಾನ್ ಜೊತೆಗೆ ಒಪ್ಪಂದ ಮಾಡಿಕೊಂಡು ಯುದ್ಧ ನಿಲ್ಲಿಸಿದರೆ ಹಿಜ್ಬುಲ್ಲಾ ಉಗ್ರರ ಸದೆಬಡಿಯಲು ಇರುವ ಅವಕಾಶವನ್ನು ಬಿಟ್ಟುಕೊಟ್ಟಂತಾಗುತ್ತದೆ' ಎಂದು ಅವರು ಹೇಳಿದ್ದಾರೆ.
'ಸಂಪೂರ್ಣ ಜಯ ಸಾಧಿಸುವವರೆಗೂ ಯುದ್ಧ ಮುಂದುವರಿಸಿ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಕರೆ ನೀಡಿದ್ದಾರೆ.
ಇಸ್ರೇಲ್ ಮತ್ತು ಲೆಬನಾನ್ ನಡುವಣ ಸಂಘರ್ಷ ನಿಲ್ಲಿಸಲು ಅಮೆರಿಕ ನೇತೃತ್ವದಲ್ಲಿ ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆ.