ಮಂಜೇಶ್ವರ: ವರ್ಕಾಡಿ ಬೇಕರಿ ಜಂಕ್ಷನ್‍ನಲ್ಲಿರುವ ಪ್ರೈವುಡ್ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿ ಕೋಟ್ಯಂತರ ರೂ.ಗಳ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಹೊಸಂಗಡಿ ನಿವಾಸಿ ಫಾರೂಕ್ ಎಂಬವರ ಮಾಲಕತ್ವದಲ್ಲಿರುವ ಫಾರೂಕ್ ಪ್ರೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ತಗಲಿರ ಬಹುದೆಂದು ಸಂಶಯಿಸಲಾಗುತ್ತಿದೆ .
ಕಾರ್ಖಾನೆಯಲ್ಲಿದ್ದ ಉಪಕರಣಗಳು, ಸಾಮಗ್ರಿಗಳೆಲ್ಲಾ ಉರಿದು ನಾಶಗೊಂಡಿದೆ. ವಿಷಯ ತಿಳಿದು
ಕಾಸರಗೋಡಿನಿಂದ ಒಂದು ಯೂನಿಟ್, ಉಪ್ಪಳದಿಂದ ಎರಡು, ಕುತ್ತಿಕ್ಕೋಲ್‍ನಿಂದ ಒಂದು, ಕಾಞಂಗಾಡ್‍ನಿಂದ ಎರಡು ಯೂನಿಟ್ ಅಗ್ನಿಶಾಮಕದಳ ಸೇರಿದಂತೆ ಸುಮಾರು 20 ಕ್ಕಿಂತಲೂ ಅಧಿಕ ವಾಹನಗಳು ತಲುಪಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ. ಕಾಸರಗೋಡು ಅಗ್ನಿಶಾಮಕದಳದ
ಬೆಂಕಿಯನ್ನು ಪೂರ್ಣವಾಗಿ ನಂದಿಸಲು ಸಾಧ್ಯವಾಗಿಲ್ಲ. ನಂದಿಸುವ ಕಾರ್ಯ ಮುಂದುವರಿಯುತ್ತಿದೆ.ಕಾರ್ಖಾನೆ ಉರಿದ ಹಿನ್ನೆಲೆಯಲ್ಲಿ ಆ ಪರಿಸರದಲ್ಲಿ ಹೊಗೆ ಆವೃತಗೊಂಡಿದೆ. ಘಟನೆ ವೇಳೆ ಕಾರ್ಖಾನೆಯಲ್ಲಿ ಯಾರೂ ಇಲ್ಲದಿದ್ದುದರಿಂದ ಹೆಚ್ಚಿನ ಅಪಾಯ ತಪ್ಪಿದೆ.
ಕಾರ್ಖಾನೆಯೊಳಗಿಂದ ಹೊಗೆ ಬರುವುದನ್ನು ಕಂಡ ಕಾವಲುಗಾರ ಮಾಲಿಕನಿಗೆ ಮಾಹಿತಿ ನೀಡಿದ್ದರು.