ಬದಿಯಡ್ಕ: ಬದಿಯಡ್ಕ ಬೋಳುಕಟ್ಟೆ ಬನ್ಯಪ್ಪಾಡಿಯ ಆದಿತ್ಯ ಎಂ. ತಂತ್ರರತ್ನ ತರಬೇತಿಯನ್ನು ಕೇರಳದ ಆಲುವ ತಂತ್ರವಿದ್ಯಾಪೀಠದಲ್ಲಿ ಪೂರ್ತಿಗೊಳಿಸಿರುತ್ತಾರೆ. ಬದಿಯಡ್ಕದ ಪ್ರಸಿದ್ಧ ಶ್ರೀಕೃಷ್ಣ ಭÀವನ ಹೋಟೆಲ್ ನಡೆಸುತ್ತಿದ್ದ ದಿ. ವೆಂಕಟ್ರಮಣ ಭಟ್ಟರ ಮೊಮ್ಮಗನಾದ ಇವರು ಕಳೆದ ಏಳು ವರ್ಷಗಳಿಂದ ತಾಂತ್ರಿಕ ವಿದ್ಯಾರ್ಜನೆಯನ್ನು ಮಾಡುತ್ತಿದ್ದರು. ಎಎಸ್‍ಬಿಎಸ್ ಬೇಳ, ನವಜೀವನ ಪ್ರೌಢಶಾಲೆ ಪೆರಡಾಲದ ಹಳೆವಿದ್ಯಾರ್ಥಿಯಾದ ಇವರು ಬಳ್ಳಪದವು ವೀಣಾವಾದಿನಿ ಮ್ಯೂಸಿಕ್ ಕ್ಯಾಂಪಸ್‍ನಲ್ಲಿ ಒಂದು ವರ್ಷ ಆರುತಿಂಗಳುಗಳ ತಾಂತ್ರಿಕ ವಿದ್ಯೆಯನ್ನು ಕಲಿತಿದ್ದರು. 2017ರಲ್ಲಿ ತಂತ್ರವಿದ್ಯಾ ತರಬೇತಿಗೆ ಸೇರಿದ್ದರು. ಅದರೊಂದಿಗೆ ನವದೆಹಲಿಯ ಸೆಂಟ್ರಲ್ ಸಾಂಸ್ಕøತ್ ಯೂನಿವರ್ಸಿಟಿಯಲ್ಲಿ ಎಂ.ಎ. ಪದವಿ ಪೂರೈಸಿದ್ದರು. ರಾಜಗೋಪಾಲ ಭಟ್ ಎಂ. ಹಾಗೂ ಪೂರ್ಣಿಮಾ ಇವರ ದ್ವಿತೀಯ ಪುತ್ರನಾಗಿದ್ದಾನೆ.