ಬದಿಯಡ್ಕ: ಕಿಳಿಂಗಾರು ಶ್ರೀ ಸಾಯಿಮಂದರಿದಲ್ಲಿ ಶನಿವಾರ ಜರಗಿದ ಶ್ರೀ ಸತ್ಯಸಾಯಿ ಬಾಬಾ ಅವರ 99ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಶ್ರೀ ಸಾಯಿ ಕುಣಿತ ಭಜನಾ ಸಂಘ ಕಿಳಿಂಗಾರು ಇವರ ಕುಣಿತ ಭಜನೆ ಪಾದಾರ್ಪಣೆ ನಡೆಯಿತು. ಭಜನಾ ತಂಡದ ಮಕ್ಕಳಿಗೆ ತಾಳವನ್ನು ಹಸ್ತಾಂತರಿಸುವ ಮೂಲಕ ಕೊಡುಗೈದಾನಿ ಸಾಯಿರಾಂ ಕೆ.ಎನ್.ಕೃಷ್ಣ ಭಟ್ ಅವರು ಮಕ್ಕಳನ್ನು ಆಶೀರ್ವದಿಸಿದರು. ನಂತರ ಮಕ್ಕಳಿಂದ ಭಜನಾ ಸೇವೆ ನಡೆಯಿತು.