ತಿರುವನಂತಪುರ: ಕೆ ರೈಲ್ ಸಿಲ್ವರ್ ಲೈನ್ ಯೋಜನೆ ಜಾರಿಗೊಳಿಸಲು ಮುಂದಾದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಿಲ್ವರ್ ಲೈನ್ ವಿರೋಧಿ ಜನತಾ ಸಮಿತಿ ಎಚ್ಚರಿಸಿದೆ.
ರಾಜ್ಯಾಧ್ಯಕ್ಷ ಎಂ.ಪಿ.ಬಾಬುರಾಜ್, ಪ್ರಧಾನ ಸಂಚಾಲಕ ಎಸ್.ರಾಜೀವನ್ ಮಾತನಾಡಿ, ಸಿಲ್ವರ್ ಲೈನ್ ಯೋಜನೆಗೆ ಬೆಂಬಲ ನೀಡಿದವರಿಗೆ ಮತ ಹಾಕುವುದಿಲ್ಲ ಎಂಬ ಹಿಂದಿನ ನಿಲುವನ್ನು ಈ ಉಪಚುನಾವಣೆಯಲ್ಲಿಯೂ ಅಳವಡಿಸಿಕೊಳ್ಳಲಾಗುವುದು. ಸಿಲ್ವರ್ ಲೈನ್ ರಾಜ್ಯದ ಪರಿಸರ ಮತ್ತು ಸಾಮಾಜಿಕ ಸ್ಥಿತಿಗೆ ಹೊಂದಿಕೆಯಾಗದ ಯೋಜನೆಯಾಗಿದೆ ಎಂದು ಹೇಳಿರುವರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಮಾತನಾಡಿ, ಯಾರು ಏನೇ ಅಂದುಕೊಂಡರೂ ಕೆ.ರೈಲು ಬರುವುದಿಲ್ಲ ಎಂದು ಹೇಳಿದ್ದು, ಯೋಜನೆ ಜಾರಿಗೊಳಿಸಿ ಕೇರಳವನ್ನು ಶ್ರೀಲಂಕಾ ಮಾಡಲು ಬಿಡುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಕೂಡ ಹೇಳಿಕೆ ನೀಡಿದ್ದರು. ಸಿಲ್ವರ್ ಲೈನ್ ಯೋಜನೆಗೆ ಪಿಣರಾಯಿ ಸರ್ಕಾರ ಮುಂದಾದರೆ ಅಭಿಯಾನ ಆರಂಭಿಸುವುದಾಗಿ ಯುಡಿಎಫ್ ಸಂಚಾಲಕ ಎಂ.ಎಂ.ಹಸನ್ ಹೇಳಿದ್ದಾರೆ.