HEALTH TIPS

ಪೆನ್ಶನರ್ಸ್ ಸಂಘದ ಮಧೂರು ವಲಯ ವಾರ್ಷಿಕ ಸಮ್ಮೇಳನ

ಮಧೂರು : ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘದ ಮಧೂರು ವಲಯದ ವಾರ್ಷಿಕ ಸಮ್ಮೇಳನವು ಶುಕ್ರವಾರ ಕೂಡ್ಲು ರಾಮದಾಸ್ ನಗರದ ರಾಷ್ಟ್ರೀಯ ಅಧ್ಯಾಪಕ ಪರಿಷತ್ತಿನ ಕಾರ್ಯಾಲಯದಲ್ಲಿ ನಡೆಯಿತು. ಮಧೂರು ಘಟಕದ ಅಧ್ಯಕ್ಷ ಎಂ. ನಾರಾಯಣ ಧ್ವಜಾರೋಹಣಗೈದು ಚಾಲನೆ ನೀಡಿದರು. ಬಳಿಕ ನಡೆದ ಅಧಿವೇಶನವನ್ನು ಜಿಲ್ಲಾಧ್ಯಕ್ಷ ಮುತ್ತುಕೃಷ್ಣನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರಾಂತ್ಯ ಉಪಾಧ್ಯಕ್ಷ ಈಶ್ವರ ರಾವ್, ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಬಿ., ಕಾಸರಗೋಡು ಬ್ಲಾಕ್ ಕಾರ್ಯದರ್ಶಿ ಸವಿತಾ ಟೀಚರ್, ಘಟಕದ ಗೌರವಾಧ್ಯಕ್ಷ ಕಕ್ಕೆಪ್ಪಾಡಿ ವಿಷ್ಣು ಭಟ್ ಹಾಗೂ ಎಂ.ನಾರಾಯಣಯ್ಯ ಮಧೂರು ಸಮ್ಮೇಳನಕ್ಕೆ ಶುಭ ಹಾರೈಸಿದರು. ಕಾರ್ಯದರ್ಶಿ  ಬಲರಾಮ ಭಟ್ ಮಧೂರು 2024ರ ವಾರ್ಷಿಕ ವರದಿ ಹಾಗೂ ಅಧ್ಯಕ್ಷ ಎಂ ನಾರಾಯಣ ಲೆಕ್ಕಪತ್ರ ಮಂಡಿಸಿದರು. ಸಭೆ ವರದಿಗಳನ್ನು ಅಂಗೀಕರಿಸಿತು.

 ಸಮ್ಮೇಳನಕ್ಕೆ ವೀಕ್ಷಕರಾದ ಜಿಲ್ಲಾಧ್ಯಕ್ಷ  ಮುತ್ತುಕೃಷ್ಣನ್ ಅವರು 2025ರ ಪದಾಧಿಕಾರಿಗಳನ್ನು ಈ ಸಂದರ್ಭ ಘೋಷಿಸಿದರು.  ಹೊಸ ಪದಾಧಿಕಾರಿಗಳಾಗಿ ಅಧ್ಯಕ್ಷ  ಶಿವ ನಾಯ್ಕ್, ಉಪಾಧ್ಯಕ್ಷರಾಗಿ  ರೇವತಿ ಟೀಚರ್, ಕಾರ್ಯದರ್ಶಿಯಾಗಿ ನೂತನಕುಮಾರಿ ಮನ್ನಿಪ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ನರಸಿಂಹ ಮಯ್ಯ ಮಧೂರು ಹಾಗೂ ಕೋಶಾಧಿಕಾರಿಯಾಗಿ ವಿಶ್ವನಾಥ ಭಟ್ ಮನ್ನಿಪ್ಪಾಡಿ ಆಯ್ಕೆಯಾದರು.  


ಪುನರ್ರಚಿತ ಕಾಸರಗೋಡು ಬ್ಲಾಕ್ ಅಧ್ಯಕ್ಷ ಎಂ.ನಾರಾಯಣ, ಉಪಾಧ್ಯಕ್ಷರಾಗಿ ಕುಸುಮಾಕರ ರಾವ್, ಕಾರ್ಯದರ್ಶಿಯಾಗಿ ಬಲರಾಮ ಭಟ್ ಮಧೂರು, ಜೊತೆ ಕಾರ್ಯದರ್ಶಿಯಾಗಿ ಶಶಿಕಲಾ ಕೋಟೆಕಣಿ, ಕೋಶಾಧಿಕಾರಿಯಾಗಿ ವಿಶ್ವನಾಥ ಭಟ್ ಮನ್ನಿಪ್ಪಾಡಿ ಹಾಗೂ ಗೌರವಾಧ್ಯಕ್ಷರಾಗಿ  ಸವಿತಾ ಟೀಚರ್ ಆಯ್ಕೆಯಾದರು.  

ಪೆನ್ಶನರ್ಸ್ ಸಂಘದ ಘಟಕ ಇಲ್ಲದ ಕಾಸರಗೋಡು ಮುನಿಸಿಪಾಲಿಟಿಗೆ ಸವಿತಾ ಟೀಚರ್, ಕಸುಮಾಕರ ರಾವ್, ಗೋಪಿಕೃಷ್ಣ, ಸೂರ್ಯಕಾಂತಿ ಅವರನ್ನು; ಮೊಗ್ರಾಲ್ ಪುತ್ತೂರ್ ಪಂಚಾಯತಿಗೆ ಶಶಿಧರ ಪಂಡಿತ್, ಸರೋಜಿನಿ ಟೀಚರ್, ಶ್ಯಾಮಲಾ ಟೀಚರ್ ಅವರನ್ನು ಹಾಗೂ ಚೆಂಗಳ ಪಂಚಾಯತಿಗೆ ಸೀತಾರಾಮ ರಾವ್, ಕೃಷ್ಣೋಜಿ ರಾವ್, ಶಾರದಾ ಮೊಳೆಯಾರ ಅವರುಗಳನ್ನು ಸಂಚಾಲಕರಾಗಿ ಬ್ಲಾಕ್ ಕಾರ್ಯದರ್ಶಿ ಬಲರಾಮ ಭಟ್ ಮಧೂರು ನಿಯುಕ್ತಿಗೊಳಿಸಿದರು.  ಈ ಸಂಚಾಲಕರು ಅತೀ ಶೀಘ್ರದಲ್ಲಿ ತಮ್ಮ ಘಟಕದಲ್ಲಿ ಸದಸ್ಯರ ಸಭೆಯನ್ನು ಕರೆದು ಪಂಚಾಯತಿ ಘಟಕದ ರೂಪೀಕರಣಕ್ಕೆ ಅನುವು ಮಾಡಿ ಕೊಡಬೇಕೆಂದು ಕಾರ್ಯದರ್ಶಿಯವರು ವಿನಂತಿಸಿದರು. ಎಂ. ನಾರಾಯಣ ಅವರು ಅಧ್ಯಕ್ಷತೆ ವಹಿಸಿದ್ದರು. ಮಧೂರು ಘಟಕದ ಕಾರ್ಯದರ್ಶಿ  ಬಲರಾಮ ಭಟ್, ಮಧೂರು ಅತಿಥಿಗಳನ್ನು ಸ್ವಾಗತಿಸಿ, ನೂತನ ಕುಮಾರಿ ವಂದಿಸಿದರು.  ಸತ್ಯನಾರಾಯಣ ತಂತ್ರಿ ಕಾರ್ಯಕ್ರಮ ನಿರೂಪಿಸಿದರು. ಪ್ರೇಮಲತಾ ಹಾಗೂ ಶಾಂತಕುಮಾರಿ ಪ್ರಾರ್ಥನೆ ಹಾಡಿದರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries