ಸಮರಸ ಚಿತ್ರಸುದ್ದಿ: ಬದಿಯಡ್ಕ: ಅಗಲ್ಪಾಡಿಯ ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ)ದ ಆಶ್ರಯದಲ್ಲಿ ಶಂಕರ ಸದನದಲ್ಲಿ ಜರುಗಿದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ 16 ವಯಸ್ಸಿನ ಕೆಳಗಿನವರ ಸ್ಪರ್ಧೆಯಲ್ಲಿ ಪರಾಶರ ಶರ್ಮಾ ಉಪ್ಪಂಗಳ ಹಾಗೂ ಶ್ರೀವತ್ಸ ದೈತೋಟ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಇವರು ಕೇರಳ ರಾಜ್ಯ ಕಿರು ಕೈಗಾರಿಕಾ ಅಸೋಸಿಯೇಷನ್ ಕಾಸರಗೋಡು ಘಟಕದ ಅಧ್ಯಕ್ಷ ರಾಜಾರಾಂ ಪೆರ್ಲ ಇವರಿಂದ ಪ್ರಶಸ್ತಿ ಪಡೆದರು.