ಭುವನೇಶ್ವರ: 'ಪುರಿ ಜಗನ್ನಾಥ ದೇವಾಲಯ ರತ್ನ ಭಂಡಾರವನ್ನು ತಲುಪಲು ಯಾವುದೇ ರಹಸ್ಯ ಮಾರ್ಗಗಳಲ್ಲಿ ಎಂಬುದು ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನಡೆಸಿದ ಸಮೀಕ್ಷೆಯಲ್ಲಿ ಪತ್ತೆಯಾಗಿದೆ' ಎಂದು ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಶುಕ್ರವಾರ ಹೇಳಿದರು.

ಇಲಾಖೆಯು ನೆಲದಾಳದ ವಸ್ತುಗಳನ್ನು ಪತ್ತೆ ಮಾಡುವ ರೆಡಾರ್ ಬಳಸಿ ಈ ಅಂಶವನ್ನು ಪತ್ತೆಹಚ್ಚಿದೆ. 'ಪ್ರಥಮ ಹಂತದ ಸಮೀಕ್ಷೆಯಲ್ಲಿ ರಹಸ್ಯ ಮಾರ್ಗ ಇರುವುದು ಪತ್ತೆಯಾಗಿಲ್ಲ. ಸಮೀಕ್ಷೆ ಪೂರ್ಣಗೊಳ್ಳುವವರೆಗೆ ಈ ಅಂಶವನ್ನು ಖಚಿತಪಡಿಸಲು ಸಾಧ್ಯವಿಲ್ಲ. ಆದರೆ, ದೇವಾಲಯದ ರತ್ನ ಭಂಡಾರದಲ್ಲಿ ಬಿರುಕು ಮೂಡಿರುವುದು ಸಮೀಕ್ಷೆಯಿಂದ ಪತ್ತೆಯಾಗಿದೆ' ಎಂದರು.
ರತ್ನ ಭಂಡಾರಕ್ಕೆ ಸಾಗುವುದಕ್ಕೆ ರಹಸ್ಯ ಮಾರ್ಗವಿದ್ದು, ಇಲ್ಲಿ ಬೆಲೆಬಾಳುವ ವಸ್ತುಗಳು, ಒಡವೆಗಳು ಇವೆ ಎಂಬುದಾಗಿ ಹೇಳಲಾಗಿತ್ತು. ಈ ಕಾರಣದಿಂದಲೇ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಮೀಕ್ಷೆ ನಡೆಸಲಾಗುತ್ತಿದೆ.
'ಇದು ಕಾರ್ತಿಕ ಮಾಸವಾಗಿದ್ದರಿಂದ ದೇವಾಲಯಕ್ಕೆ ಬರುವ ಭಕ್ತ ಸಂಖ್ಯೆ ಅಧಿಕವಾಗಿರುತ್ತದೆ. ಆದ್ದರಿಂದ, ಈ ಮಾಸ ಮುಗಿದ ಬಳಿಕ ರತ್ನ ಭಂಡಾರದಲ್ಲಿ ಮೂಡಿದ ಬಿರುಕನ್ನು ದುರಸ್ತಿಗೊಳಿಸಲಾಗುವುದು' ಎಂದು ಸಚಿವ ಪೃಥಿರಾಜ್ ತಿಳಿಸಿದರು.