HEALTH TIPS

ಜೀತದಾಳು ಕಳ್ಳಸಾಗಣೆ ತಡೆಗೆ ‍ಪ್ರಸ್ತಾವ ಸಲ್ಲಿಸಲು ಸುಪ್ರೀಂ ಕೋರ್ಟ್‌ ಸೂಚನೆ

ವದೆಹಲಿ: ಬಾಲಕರನ್ನೂ ಒಳಗೊಂಡಂತೆ ಜೀತದಾಳುಗಳ ಅಂತರರಾಜ್ಯ ಕಳ್ಳಸಾಗಣೆ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜತೆ ಸಭೆ ನಡೆಸಿ, ಪ್ರಸ್ತಾವನೆ ಸಿದ್ಧಪಡಿಸುವಂತೆ ಸುಪ್ರೀಂ ಕೋರ್ಟ್‌ ಗುರುವಾರ ನಿರ್ದೇಶನ ನೀಡಿದೆ.

ಜೀತದಾಳುಗಳ ಕಳ್ಳಸಾಗಣೆ ತಪ್ಪಿಸಲು ಮತ್ತು ಅವರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್‌ ಅವರ ಪೀಠ ನಡೆಸಿತು.

ಉತ್ತರ ಪ್ರದೇಶದಲ್ಲಿ ಬಿಡುಗಡೆಯಾದ 5,264 ಜೀತದಾಳುಗಳ ಪೈಕಿ, 1,101 ಜನರಿಗೆ ಮಾತ್ರ ತಕ್ಷಣವೇ ಆರ್ಥಿಕ ನೆರವು ದೊರೆತಿದ್ದು, ಉಳಿದವರು ನೆರವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಮಾಹಿತಿಯನ್ನು ಗಮನಿಸಿದ ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಪ್ರಕರಣದ ಗಂಭೀರತೆಯನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಬಿ.ಆರ್. ಗವಯ್ ಹಾಗೂ ಕೆ.ವಿ. ವಿಶ್ವನಾಥನ್ ಅವರನ್ನು ಒಳಗೊಂಡ ಪೀಠವು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಟಾರ್ನಿ ಜನರಲ್ ಅವರ ನೆರವನ್ನೂ ಪಡೆಯುವುದಾಗಿ ತಿಳಿಸಿತು. ಬಿಡುಗಡೆಯಾದ ಜೀತದಾಳುಗಳಲ್ಲಿ ಮಕ್ಕಳೂ ಇರುವುದರಿಂದ ತಕ್ಷಣಕ್ಕೆ ಅವರ ನೆರವಿಗೆ ಹಣಕಾಸಿನ ನೆರವು ಅಗತ್ಯ ಇರುವುದನ್ನು ಉಲ್ಲೇಖಿಸಿತು.

ಸಮಸ್ಯೆ ಬಗೆಹರಿಸಲು ಪರಿಹಾರದ ಕುರಿತು ನಿರ್ಧರಿಸುವಾಗ ರಾಷ್ಟ್ರೀಯ ಮಾವನ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಸಲಹೆಯನ್ನೂ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ಮಕ್ಕಳ ಅಂತರರಾಜ್ಯ ಕಳ್ಳಸಾಗಣೆ ಸಮಸ್ಯೆಯನ್ನು ಪರಿಹರಿಸಲು, ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಏಕೀಕೃತ ರೀತಿಯಲ್ಲಿ ಸಾಗಬೇಕಿದೆ ಎಂದು ಹೇಳಿದ ಪೀಠ, ವಿಚಾರಣೆಯನ್ನು ಆರು ವಾರಗಳವರೆಗೆ ಮುಂದೂಡಿತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries