ಕಾಸರಗೋಡು: ಜಿಲ್ಲೆಯ ಆರಾಧನಾಲಯ ಸೇರಿದಂತೆ ವಿವಿಧೆಡೆ ನಡೆದಿರುವ ಸರಣಿ ಕಳವು ಪ್ರಕರಣಗಳಲ್ಲಿ ಒಂದೇ ತಂಡದ ಕೈವಾಡವಿರುವುದಾಗಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಮಂಜೇಶ್ವರ ವರ್ಕಾಡಿಯ ಇಗರ್ಜಿಯಲ್ಲಿ ಅ. 28ರಂದು ನಡೆದ ಕಳವು ಪ್ರಕರಣದಲ್ಲೂ ಇದೇ ತಂಡದ ಕೈವಾಡವಿರುವುದಾಗಿ ಸಂಶಯ ವ್ಯಕ್ತಪಡಿಸಲಾಗಿದೆ. ಕಳವು ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕಾಸರಗೋಡು, ಮೇಲ್ಪರಂಬ, ವಿದ್ಯಾನಗರ, ಬದಿಯಡ್ಕ, ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಭಜನಾಮಂದಿರ, ದೇವಸ್ಥಾನ, ವ್ಯಾಪಾರಿ ಸಂಸ್ಥೆಗಳಿಂದ ಕಳವು ನಡೆದಿದೆ.