ಪ್ರಸ್ತುತ ಶಾಪಿಂಗ್ ಹಾಗೂ ಬಿಲ್ ಪಾವತಿ ಸೇರಿದಂತೆ ಅನೇಕ ದೈನಂದಿನ ಚಟುವಟಿಕೆಗಳಿಗೆ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ರೂಢಿ ಆಗಿವೆ. ಆದಾಗ್ಯೂ, ಇನ್ನೂ ಕೆಲವು ಸಂದರ್ಭಗಳಲ್ಲಿ ನಗದು (Cash) ಅಗತ್ಯ ಇರವಿದೆ. ಅನೇಕ ಜನರು ಬ್ಯಾಂಕ್‌ಗಳು ಅಥವಾ ಎಟಿಎಂಗಳ (ATM) ಮೂಲಕ ಹಣವನ್ನು ವಿತ್‌ಡ್ರಾ (Withdraw) ಮಾಡುತ್ತಾರೆ. ಆದರೆ ಎಟಿಎಂ ಕಾರ್ಡ್ ಇಲ್ಲದೇ ಕೂಡಾ ಜನರು ತಮ್ಮ ಆಧಾರ್ ಕಾರ್ಡ್ ಮೂಲಕ ಹಣವನ್ನು ವಿತ್‌ಡ್ರಾ ಮಾಡಬಹುದು?
ಹೌದು, ATM ಕಾರ್ಡ್ ಇಲ್ಲದಿದ್ದರೂ, ಜನರು ತಮ್ಮ ಆಧಾರ್ ಕಾರ್ಡ್ ಮೂಲಕ ಬ್ಯಾಂಕ್ ಖಾತೆಯಿಂದ ಹಣ ವಿತ್‌ಡ್ರಾ ಮಾಡುವುದಕ್ಕೆ ಅವಕಾಶ ಇದೆ. ಈ ಸೇವೆ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (AEPS) ಆಗಿದೆ. ಇನ್ನು ಈ ವಿಧಾನವು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನಿಂದ ಪ್ರಾರಂಭಿ ಮಾಡಲ್ಪಟ್ಟಿದೆ. ಹಾಗಾದರೇ ಏನಿದು AEPS ವ್ಯವಸ್ಥೆ? ಆಧಾರ್ ಬಳಕೆ ಮೂಲಕ ಹಣ ಪಡೆಯುವುದು ಹೇಗೆ? ಎಂಬ ಮಾಹಿತಿ ತಿಳಿಯಲು ಮುಂದೆ ಓದಿರಿ.
ಏನಿದು AEPS ವ್ಯವಸ್ಥೆ?
ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (AEPS - Aadhaar Enabled Payment System) ನಲ್ಲಿ ಜನರು ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ವಿವಿಧ ಬ್ಯಾಂಕಿಂಗ್ ಚಟುವಟಿಕೆಗಳನ್ನು ನಿರ್ವಹಿಸಲು ನೆರವಾಗುತ್ತದೆ. ಮೈಕ್ರೋ-ಎಟಿಎಂಗಳು ಮತ್ತು ಇತರ ಬ್ಯಾಂಕಿಂಗ್ ಏಜೆಂಟ್‌ಗಳಲ್ಲಿ ನಗದು ಹಿಂಪಡೆಯುವಿಕೆ, ಬ್ಯಾಲೆನ್ಸ್ ಮಾಹಿತಿ ತಿಳಿಯುವುದು ಮತ್ತು ಹಣ ವರ್ಗಾವಣೆಯಂತಹ ಹಣಕಾಸು ಸೇವೆಗಳನ್ನು ಸುಲಭ ಮಾಡಲು ಈ ವಿಧಾನವನ್ನು ವಿನ್ಯಾಸ ಮಾಡಲಾಗಿದೆ.
ಆಧಾರ್ ಕಾರ್ಡ್ ಬಳಸಿ ಹಣ ವಿತ್‌ಡ್ರಾ ಮಾಡುಲು ಹೀಗೆ ಮಾಡಿ
* ಮೈಕ್ರೋ-ಎಟಿಎಂಗೆ ಭೇಟಿ ಮಾಡಿರಿ - ಬ್ಯಾಂಕಿಂಗ್ ಏಜೆಂಟ್ ಅಥವಾ ಎಇಪಿಎಸ್ (AEPS) ಸೇವೆಗಳನ್ನು ಸಪೋರ್ಟ್ ಮಾಡುವ ಮೈಕ್ರೋ-ಎಟಿಎಂ (Micro ATM) ಕೇಂದ್ರಗಳನ್ನು ಗುರುತು ಮಾಡಿರಿ. ಅಂದಹಾಗೆ Micro ATM ಗಳು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಬ್ಯಾಂಕಿಂಗ್ ಔಟ್‌ಲೆಟ್‌ಗಳು ಅಥವಾ ಮೊಬೈಲ್ ಬ್ಯಾಂಕಿಂಗ್ ಸೇವೆಗಳಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ.
* ಆಧಾರ್ ಸಂಖ್ಯೆಯನ್ನು ನೀಡಿರಿ - ಮೈಕ್ರೋ ಎಟಿಎಂ (Micro ATM) ಕೇಂದ್ರದಲ್ಲಿ, ನಿಮ್ಮ 12 ಸಂಖ್ಯೆಯ ಆಧಾರ್ ನಂಬರ್ ಅನ್ನು ನಮೂದಿಸಿ. ನಂತರ ವಹಿವಾಟನ್ನು ಮುಂದುವರಿಸಲು ಮಾಹಿತಿಯು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಿ.
* ಫಿಂಗರ್‌ಪ್ರಿಂಟ್ ದೃಢೀಕರಣ ಮಾಡಿರಿ - ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನಲ್ಲಿ ಬಯೋಮೆಟ್ರಿಕ್ ಪರಿಶೀಲನೆಗಾಗಿ ನಿಮ್ಮ ಹೆಬ್ಬೆರಳನ್ನು ಬಳಕೆ ಮಾಡಿರಿ. ಇನ್ನು ಈ ಪ್ರಕ್ರಿಯೇ ಯಶಸ್ವಿಯಾಗಿ ದೃಢೀಕರಣವಾಗಲು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾದ ಡೇಟಾದೊಂದಿಗೆ ಫಿಂಗರ್‌ಪ್ರಿಂಟ್ ಹೊಂದಿಕೆ ಆಗಬೇಕು.
* ಹಣ ವಿತ್‌ಡ್ರಾ ಆಯ್ಕೆ ಮಾಡಿರಿ - ಆ ಬಳಿಕ ಸಿಸ್ಟಮ್ ನಿಮಗೆ ಭಿನ್ನ ಆಯ್ಕೆಗಳನ್ನು ನೀಡುತ್ತದೆ. ಅಲ್ಲಿ ನೀವು ಹಣ ವಿತ್‌ಡ್ರಾ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು.
* ಹಣ ವಿತ್‌ಡ್ರಾ ಮಾಡುವ ಮೊತ್ತ ನಮೂದಿಸಿ - ತದ ನಂತರ ನೀವು ವಿತ್‌ಡ್ರಾ ಮಾಡ ಬಯಸುವ ಮೊತ್ತವನ್ನು ನಮೂದಿಸಿ. ಬಳಿಕ ನಿಮ್ಮ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯಿಂದ ಮೊತ್ತವನ್ನು ಡೆಬಿಟ್ ಮಾಡಲಾಗುತ್ತದೆ.
* ಹಣ ಮತ್ತು ದೃಢೀಕರಣವನ್ನು ಸ್ವೀಕರಿಸಿ - ವಹಿವಾಟು ಪೂರ್ಣಗೊಂಡ ಬಳಿಕ, ಬ್ಯಾಂಕಿಂಗ್ ಏಜೆಂಟ್ ನಿಮಗೆ ವಿನಂತಿಸಿದ ಹಣವನ್ನು ನೀಡುತ್ತದೆ. ವಹಿವಾಟನ್ನು ಖಚಿತಪಡಿಸಲು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಮ್‌ಎಸ್ ನೋಟಿಫಿಕೇಶನ್ ಅನ್ನು ಕಳುಹಿಸಲಾಗುತ್ತದೆ.