ಕೊಚ್ಚಿ: ಗ್ಯಾಂಗ್ ಲೀಡರ್ ಓಂಪ್ರಕಾಶ್ ಆರೋಪಿಯಾಗಿರುವ ಡ್ರಗ್ಸ್ ಪ್ರಕರಣದಲ್ಲಿ ಕೊಕೇನ್ ಇರುವುದು ಪೋರೆನ್ಸಿಕ್ ವರದಿಯಿಂದ ದೃಢಪಟ್ಟಿದೆ.
ಅವರು ತಂಗಿದ್ದ ಹೋಟೆಲ್ ಕೊಠಡಿಯಲ್ಲಿ ಕೊಕೇನ್ ಇರುವುದು ದೃಢಪಟ್ಟಿದೆ. ಇದರ ಪ್ರಕಾರ, ಎನ್‍ಡಿಪಿಎಸ್ ಕಾಯ್ದೆಯಡಿ ವಿಚಾರಣೆ ಮುಂದುವರಿಸಲು ಕೊಚ್ಚಿ ಪೋಲೀಸರಿಗೆ ಸೂಚನೆ ನೀಡಲಾಗಿದೆ.
ವೈಜ್ಞಾನಿಕ ಪರೀಕ್ಷೆಯ ಫಲಿತಾಂಶಗಳ ಕೊರತೆಯಿಂದಾಗಿ ಹೋಟೆಲ್‍ನಲ್ಲಿ ಕೊಕೇನ್ ಇರುವುದನ್ನು ಖಚಿತಪಡಿಸಲು ಸಾಧ್ಯವಾಗದಿರುವುದು ಪ್ರಕರಣದಲ್ಲಿ ಪೆÇಲೀಸರಿಗೆ ದೊಡ್ಡ ಸವಾಲಾಗಿತ್ತು. ಓಂ ಪ್ರಕಾಶ್ ಅವರು ಕೊಕೇನ್ ಸೇವಿಸಿರುವುದು ಸಾಬೀತಾಗದ ಹಿನ್ನೆಲೆಯಲ್ಲಿ ರಾಣಾಕುಲಂ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ವಿಧಿವಿಜ್ಞಾನ ವರದಿ ಆಧರಿಸಿ ಓಂ ಪ್ರಕಾಶ್ ಜಾಮೀನು ರದ್ದುಗೊಳಿಸುವಂತೆ ಪೋಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದರು.
ಆದರೆ ಹೊಟೇಲ್ ಕೊಠಡಿಯಲ್ಲಿ ಕೊಕೇನ್ ಇರುವುದು ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ಪತ್ತೆಯಾಗಿದೆ ಎಂದೂ ವರದಿ ಹೇಳಿದೆ. ತಾರೆಯರಾದ ಶ್ರೀನಾಥ್ ಭಾಸಿ ಮತ್ತು ಪ್ರಯಾಗ ಮಾರ್ಟಿನ್ ಪಾನಮತ್ತ ಪಾರ್ಟಿ ನಡೆದ ಸ್ಥಳಕ್ಕೆ ತಲುಪಿದ್ದನ್ನು ಪೆÇಲೀಸರು ಪತ್ತೆ ಮಾಡಿದ್ದಾರೆ.