ಬದಿಯಡ್ಕ: ಬದಿಯಡ್ಕ ಪೋಲೀಸ್ ಠಾಣೆ ವ್ಯಾಪ್ತಿಯ ಮಾನ್ಯ ಶ್ರೀ ಅಯ್ಯಪ್ಪ ಭಜನಾಮಂದಿರದ ಬೀಗ ಒಡೆದು ನುಗ್ಗಿ ನಡೆಸಿದ್ದ ಶ್ರೀ ಅಯ್ಯಪ್ಪ ದೇವರ ಬೆಳ್ಳಿಯ ಛಾಯಾಚಿತ್ರ ಹಾಗೂ ಎರಡು ಕಾಣಿಕೆ ಹುಂಡಿಗಳಿಂದ ನಗದು ದೋಚಿದ ಪ್ರಕರಣದಲ್ಲಿ ಮಹತ್ತರ ಸಾಕ್ಷ್ಯ ಲಭಿಸಿದೆ.
ಘಟನೆ ನಡೆದು ಎರಡು ದಿನಗಳ ಬಳಿಕ ನಿನ್ನೆ ಮಾನ್ಯ ಭಜನಾ ಮಂದಿರದಿಂದ ನೀರ್ಚಾಲು ರಸ್ತೆಯ ಸುಮಾರು 600 ಮೀಟರ್ ದೂರದಲ್ಲಿ ಅಯ್ಯಪ್ಪ ಸ್ವಾಮಿಯ ಬೆಳ್ಳೀಯ ಛಾಯಾಚಿತ್ರ ಅಳವಡಿಸಿದ್ದ ಪ್ರೇಮ್ ಹಾಗೂ ಗಾಜಿನ ಚೂರುಗಳು ಉಪೇಕ್ಷಿತ ಸ್ಥಿತಿಯಲ್ಲಿ ರಸ್ತೆ ಬದಿ ಪತ್ತೆಯಾಗಿವೆ.
ಕಳವು ನಡೆದ ಮಂದಿರದ ಅನತಿ ದೂರದಲ್ಲೇ ಇವು ಪತ್ತೆಯಾಗಿರುವುದು ಅಚ್ಚರಿಮೂಡಿಸಿದ್ದು, ನಿನ್ನೆ ಮುಂಜಾನೆ ಇಲ್ಲಿ ಎಸೆದಿರುವ ಸಾಧ್ಯತೆ ಕಂಡುಬಂದಿದೆ. ಬದಿಯಡ್ಕ ಪೋಲೀಸರು ಆಗಮಿಸಿ ತನಿಖೆ ನಡೆಸಿದ್ದು, ಜೊತೆಗೆ ಕಾಸರಗೋಡಿನಿಂದ ಆಗಮಿಸಿದ್ದ ಫೋರೆನ್ಸಿಕ್ ತಜ್ಞರು ಬೆರಳಚ್ಚು ಸಂಗ್ರಹಿಸಿದ್ದಾರೆ.