ಕುಂಬಳೆ: ಕೇರಳ ರಾಜ್ಯ ಸೇವಾ ಪಿಂಚಣಿದಾರರ ಒಕ್ಕೂಟ(ಕೆಎಸ್‍ಎಸ್‍ಪಿಎ) ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವಾರ್ಷಿಕ ಸಮಾವೇಶ ಕುಂಬಳೆ ಪೈ ಸಭಾಂಗಣದಲ್ಲಿ ಜರಗಿತು. ಕೆ.ಎಸ್‍ಎಸ್‍ಪಿಎ ಜಿಲ್ಲಾ ಸಮಿತಿ ಅಧ್ಯಕ್ಷ ಪಿ. ಸಿ. ಸುರೇಂದ್ರನ್ ನಾಯರ್ ಉದ್ಘಾಟಿಸಿದರು.
ಯೂಸುಫ್ ಮಾಸ್ಟರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವನಿತಾ ಕಮಿಟಿ ಸದಸ್ಯೆ ಸರೋಜಿನಿ ಟೀಚರ್, ಜಿಲ್ಲಾ ವನಿತಾ ಕಾರ್ಯದರ್ಶಿ ಜಯಲಕ್ಷ್ಮಿ ಟೀಚರ್, ಏssಠಿಚಿ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿ ಅಧ್ಯಕ್ಷ ಚಂದ್ರಶೇಖರ ಮಾಸ್ಟರ್, ಕಾರ್ಯದರ್ಶಿ ಸೀತಾರಾಮ ಮಲ್ಲ ಹಾಗೂ ಬಾಬು ರಾಜ್ ಉಪಸ್ಥಿತರಿದ್ದರು.
ಮಂಜೇಶ್ವರ ವಿಧಾನಸಭಾ ಸಮಿತಿ ಕಾರ್ಯದರ್ಶಿ ಮಾಯಿಲ ನಾಯ್ಕ್ ಸ್ವಾಗತಿಸಿದರು. ಜಿಲ್ಲಾ ಕೌನ್ಸಿಲರ್ ಮೆರ್ಸಿ ಸಿ ಜೆ ವಂದಿಸಿದರು. ಮುಂದಿನ ವರ್ಷದ ನೂತನ ಪದಾದಿಕಾರಿಗಳ ಆಯ್ಕೆ ನಡೆಯಿತು. ಯುಸಫ್ ಮಾಸ್ಟರ್ ಅಧ್ಯಕ್ಷ, ಮಾಯಿಲ ನಾಯ್ಕ್ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯಾಗಿ ರಾಧಾ ಕೃಷ್ಣನ್ ಅವರನ್ನು ಆಯ್ಕೆ ಮಾಡಲಾಯಿತು.