ಬದಿಯಡ್ಕ: ಕುಂಬಳೆ ಉಪಜಿಲ್ಲಾ ಮಟ್ಟದ ವಿಜ್ಞಾನ, ಸಮಾಜ, ಗಣಿತ ಹಾಗೂ ವೃತ್ತಿ ಪರಿಚಯ ಮೇಳದಲ್ಲಿ ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯು ಅತ್ಯತ್ತಮ ಸಾಧನೆಗೈದು ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ.
ವೃತ್ತಿಪರಿಚಯ ಮೇಳದಲ್ಲಿ ವೈಷ್ಣವ್ ಭಟ್ ಸೀಮೆ ಸುಣ್ಣದ ಚಾಕ್ ತಯಾರಿಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ, ಸಮಾಜ ವಿಜ್ಞಾನ ಮೇಳದಲ್ಲಿ ಸಿಂಚನ್ ಬಿ ಮತ್ತು ನವ್ಯಶ್ರೀ ಎಲ್.ಪಿ ವಿಭಾಗ ಸಮಾಜ ವಿಜ್ಞಾನ ಮೋಡಲ್ ನಲ್ಲಿ ಎ ಗ್ರೇಡ್ ನೊಂದಿಗೆ ದ್ವಿತೀಯ, ಮಂಜುಷಾ ಎಲ್.ಪಿ ವಿಭಾಗ ಬೊಂಬೆ ನಿರ್ಮಾಣದಲ್ಲಿ ಎ ಗ್ರೇಡ್ ನೊಂದಿಗೆ ತೃತೀಯ, ವಿಜೇಶ್ ಎನ್ ಎಲ್.ಪಿ ಆವೆ ಮಣ್ಣಿನ ಕಲಾಕೃತಿ ತಯಾರಿಯಲ್ಲಿ ಎ ಗ್ರೇಡ್ ನೊಂದಿಗೆ ತೃತೀಯ, ಅಲ್ಲದೆ ಅಶ್ವಿತಾ.ಎ ಜಿಯೋಮೆಟ್ರಿಕ್ ಚಾರ್ಟಿನಲ್ಲಿ, ಬೀಡ್ಸ್ ವರ್ಕ್ ನಲ್ಲಿ ಧನ್ವಿ ಎಸ್.ಕೆ., ಪೇಪರ್ ಕ್ರಾಫ್ಟ್ ನಲ್ಲಿ ಪಲ್ಲವಿ ಬಿ., ವಿಜ್ಞಾನ ಚಾರ್ಟಿನಲ್ಲಿ ವೈಷ್ಣವ್ ಕೆ. ಯಂ ಮತ್ತು ಧೀರಜ್ ಎಸ್.ಪಿ, ವಿಜ್ಞಾನ ಸಂಗ್ರಹದಲ್ಲಿ ಸಿಂಚನಾಲಕ್ಷ್ಮೀ ಮತ್ತು ವೈಭವಿ. ಎ ಗ್ರೇಡುಗಳನ್ನು ಪಡೆದಿರುತ್ತಾರೆ. ಶಾಲೆಯ ಪ್ರತಿಭೆಗಳನ್ನು ಶಾಲಾ ವ್ಯವಸ್ಥಾಪಕರು, ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯಿನಿ, ಅಧ್ಯಾಪಕ ವೃಂದವು ಅಭಿನಂದಿಸಿದೆ.