ಕಾಸರಗೋಡು: ನೀಲೇಶ್ವರ ಅಚ್ಚಾಂತುರ್ತಿಯಲ್ಲಿ ನಡೆದ ಉತ್ತರ ಮಲಬಾರ್ ಜಲೋತ್ಸವಕ್ಕೆ ವಿಧಾನಸಭಾ ಸ್ಪೀಕರ್ ಎ.ಎನ್ ಶಂಸೀರ್ ಚಾಲನೆ ನೀಡಿದರು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಲಬಾರ್ ಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಜಲೋತ್ಸವ ಒಂದು ಮೈಲಿಗಲ್ಲಾಗಿದ್ದು, ಕರಾವಳಿಯ ಪ್ರವಾಸೋದ್ಯಮದ ಮುಖಚ್ಛಾಯೆ ಬದಲಾಯಿಸಿರುವುದಾಗಿ ತಿಳಿಸಿದರು.
ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ ಇನ್ಬಾಶೇಖರ್, ಅಪರ ಜಿಲ್ಲಾಧಿಕಾರಿ ಪ್ರತೀಕಜೈನ್, ನೀಲೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯರ, ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ.ಶಾಂತಾ, ಚೆರುವತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ವಿ.ಪ್ರಮೀಳಾ, ವಲಿಯಪರಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ವಿ.ಸಜೀವನ್, ಪಡಟನ್ನ ಗ್ರಾ.ಪಂ. ಅಧ್ಯಕ್ಷ ಪಿ.ವಿ.ಮುಹಮ್ಮದ್ ಅಸ್ಲಾಂ, ತೃಕರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಕೆ.ಬಾವಾ, ವೆಸ್ಟ್ ಎಳೇರಿ ಪಂಚಾಯಿತಿ ಅಧ್ಯಕ್ಷೆ ಗಿರಿಜಾಮೋಹನನ್, ಈಸ್ಟ್ ಎಳೇರಿ ಗ್ರಾ.ಪಂ.ಅಧ್ಯಕ್ಷ ಜೋಸೆಫ್ ಮುಥೋಳಿ, ಕಯ್ಯೂರು ಚಿಮೇನಿ ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷೆ ಎಂ.ಶಾಂತಾ, ಬಿ.ಆರ್.ಡಿ.ಸಿ.ವ್ಯವಸ್ಥಾಪಕ ನಿರ್ದೇಶಕ ಶಿಜಿನ್ ಪರಂಬತ್, ಪ್ರವಾಸೋದ್ಯಮ ಉಪನಿರ್ದೇಶಕ ಜಿ.ಶ್ರೀಕುಮಾರ್, ಡಿಟಿಪಿಸಿ ಮಾಜಿ ಕಾರ್ಯದರ್ಶಿ ಲಿಜೋ ಜೋಸೆಫ್, ಹಾಲಿ ಡಿಟಿಪಿಸಿ ಕಾರ್ಯದರ್ಶಿಶ್ಯಾಮ್ ಕೃಷ್ಣನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ತ್ರಿದಳ ಪಂಚಾಯಿತಿ, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.