ಶಬರಿಮಲೆ: ಶಬರಿಮಲೆ ದೇಗುಲದ ಗರ್ಭಗುಡಿ ನಿನ್ನೆ ಸಂಜೆ ಮಂಡಲ ಪೂಜೆಗಾಗಿ ತೆರೆಯಲ್ಪಟ್ಟಿದೆ.. ಶುಕ್ರವಾರ ಸಂಜೆ 4 ಗಂಟೆಗೆ ತೆರೆಯಲಾಯಿತು.
ಬಳಿಕ ಮೇಲ್ಶಾಂತಿ ಹದಿನೆಂಟನೇ ಮೆಟ್ಟಿಲು ಹತ್ತಿ ಒಳಪ್ರವೇಶಿಸಿದರು. ಇದರೊಂದಿಗೆ 41 ದಿನಗಳ ಮಂಡಲ ಮಾಸದ ಯಾತ್ರೆ ಆರಂಭವಾಯಿತು.
ಮೇಲ್ಶಾಂತಿಗಳು ಹದಿನೆಂಟು ಮೆಟ್ಟಲುಗಳ ಕೆಳಗೆ ಬಂದು ತಲುಪಿದ್ದ ನಿಯುಕ್ತ ಶಬರಿಮಲೆ ಮಾಳಿಗÀಪ್ಪುರಂ ಮೇಲ್ಶಾಂತಿಯವರನ್ನು ಕೈಹಿಡಿದು 18ನೇ ಮೆಟ್ಟಿಲು ಹತ್ತಿಸಿದರು. ಆ ಬಳಿಕ ಭಕ್ತರೂ ಮೆಟ್ಟಿಲು ಹತ್ತಲಾರಂಭಿಸಿದರು.
ಶಬರಿಮಲೆ ಮೇಲ್ಶಾಂತಿ ಎಸ್. ಅರುಣ್‍ಕುಮಾರ್ ನಂಬೂದಿರಿ ಅವರ ಅಭಿಷೇಕ ಸಮಾರಂಭ ಸನ್ನಿಧಾನದಲ್ಲಿ ನಡೆಯಿತು. ಸಮಾರಂಭಗಳನ್ನು ತಂತ್ರಿ ಕಂಠಾರರ್ ರಾಜೀವ್ ನೆರವೇರಿಸಿದರು. ನೇಮಿತ ಮೇಲ್ಶಾಂತಿ ಅಭಿಷೇಕಗೈದು ನಂತರ ಅವರನ್ನು ಗರ್ಭಗುಡಿಯೊಳಗೆ ಕರೆತಂದು ಮೂಲಮಂತ್ರ ಬೋಧಿಸಲಾಯಿತು.
ತಂತ್ರಿಗಳ ನೇತೃತ್ವದಲ್ಲಿ ಮಾಳಿಗಪ್ಪುರಂ ನೂತನ ಮೇಲ್ಶಾಂತಿ ವಾಸುದೇವನ್ ನಂಬೂದಿರಿಯವರ ಅಭಿಷೇಕವೂ ನಡೆಯಿತು. ತಂತ್ರಿ ಕಂಠಾರರ್ ಬ್ರಹ್ಮದತ್ತ ಸಾನ್ನಿಧ್ಯ ವಹಿಸಿದ್ದರು. ಮೇಲ್ಶಾಂತಿ ಮಹೇಶ್ ನಂಬೂದಿರಿ ಅವರು ದೇವಸ್ಥಾನವನ್ನು ಮುಚ್ಚಿ ದೇವಸ್ವಂ ಅಧಿಕಾರಿಗಳಿಗೆ ಕೀಲಿಕೈ ಹಸ್ತಾಂತರಿಸಿದ ನಂತರ ಅವರು ಒಂದು ವರ್ಷ ಅಯ್ಯಪ್ಪ ಪೂಜೆಯನ್ನು ಪೂರ್ಣಗೊಳಿಸಿದ ನಂತರ ಬೆಟ್ಟ ಇಳಿದು ತೆರಳಿದರು.
ಇಂದು ಶನಿವಾರದಿಂದ ಮುಂಜಾನೆ 3 ಗಂಟೆಗೆ ಗರ್ಭಗುಡಿ ತೆರೆಯಲ್ಪಡುತ್ತದೆ. ನಿನ್ನೆ ಮಧ್ಯಾಹ್ನ 1 ಗಂಟೆಯಿಂದ ಪಂಬಾದಿಂದ ಸನ್ನಿಧಾನಕ್ಕೆ ಭಕ್ತರ ಗಡಣ ಬರಲಾರಂಭಿಸಿತ್ತು. ಶುಕ್ರವಾರ ದರ್ಶನಕ್ಕಾಗಿ 30000 ಜನರು ಆನ್‍ಲೈನ್‍ನಲ್ಲಿ ಬುಕ್ ಮಾಡಿದ್ದರು.
ಡಿಸೆಂಬರ್ 22 ರಂದು ತಂಗಂಗಿ ಮೆರವಣಿಗೆ ಆರಂಭವಾಗಲಿದೆ. ಡಿ.26ರಂದು ಬೆಳಗ್ಗೆ 11.30ಕ್ಕೆ ತಂಗಂಗಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10:ಗಂಟೆಗೆ ಮಂಡಲಕಾಲ ಯಾತ್ರೆ ಸಮಾರೋಪಗೊಳ್ಳಲಿದೆ. ಡಿಸೆಂಬರ್ 30 ರಂದು ಮಕರ ಬೆಳಕು ಉತ್ಸವಕ್ಕೆ ಮತ್ತೆ ತೆರೆಯಲಿದೆ.