ಪತ್ತನಂತಿಟ್ಟ: ರಸ್ತೆ ಸುರಕ್ಷತಾ ಸಭೆಗೆ ಎಸ್ಪಿ ಬದಲಿಗೆ ಬಂದ ಎಸ್‍ಐ ಅವರನ್ನು ಜಿಲ್ಲಾಧಿಕಾರಿ ಎಸ್.ಪ್ರೇಮಕೃಷ್ಣನ್ ವಾಪಸ್ ಕಳುಹಿಸಿದ ಘಟನೆ ನಡೆದಿದೆ.
ಲಕ್ಷಗಟ್ಟಲೆ ಹಣ ಮಂಜೂರಾತಿ ಸೇರಿದಂತೆ ಮಹತ್ವದ ನಿರ್ಣಯ ಕೈಗೊಳ್ಳಬೇಕಿದ್ದ ಸಭೆಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹಾಜರಾಗಿರಲಿಲ್ಲ. ಮಹತ್ವದ ಸಭೆ ಆಗಿದ್ದರಿಂದ ಎಸ್ಪಿ ಹಾಜರಾಗಲೇಬೇಕು ಎಂದು ಜಿಲ್ಲಾಧಿಕಾರಿ ಹಠ ಹಿಡಿದರು.
ಪತ್ತನಂತಿಟ್ಟದಲ್ಲಿ ಬುಧವಾರ ನಡೆದ ರಸ್ತೆ ಸುರಕ್ಷತಾ ಸಭೆಯಲ್ಲಿ ಈ ಘಟನೆ ನಡೆದಿದೆ. ಸಭೆಗೆ ಗೈರು ಹಾಜರಾಗಿದ್ದ ಜಿಲ್ಲಾ ಪೋಲೀಸ್ ವರಿಷ್ಠ ವಿ.ಜಿ.ವಿನೋದ್ ಕುಮಾರ್, ಸಂಘದ ಮುಖಂಡರೂ ಆದ ಎಸ್ ಐ ಬಿ.ಎಸ್.ಶ್ರೀಜಿತ್ ಅವರನ್ನು ಕಳುಹಿಸಿದರು. ಒತ್ತಡದ ಕೆಲಸ ಕಾರಣಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು. ಆದರೆ ಮಹತ್ವದ ಸಭೆಗೆ ಎಸ್ಪಿ ಅವರೇ ಹಾಜರಾಗಬೇಕು ಎಂಬ ನಿಲುವನ್ನು ಜಿಲ್ಲಾಧಿಕಾರಿ ತಳೆದರು.
ಎಸ್‍ಐ ಅವರನ್ನು ಜಿಲ್ಲಾಧಿಕಾರಿ ವಾಪಸ್ ಕಳುಹಿಸಿದ್ದರಿಂದ ಬದಲಿಗೆ ಡಿವೈಎಸ್‍ಪಿ ಹಾಜರಾಗಿದ್ದರು. ಶಬರಿಮಲೆ ಕ್ಷೇತ್ರದ ಮಂಡಲ ಪೂಜಾ ಅವಧಿ ಹತ್ತಿರವಿರುವಾಗ ಎಸ್‍ಐ ಮಾತ್ರ ಭಾಗವಹಿಸಿದರೆ ಪರವಾಗಿಲ್ಲ ಎಂದು ಸ್ವತಃ ಪೋಲೀಸ್ ಅಧಿಕಾರಿಗಳೇ ಹೇಳುತ್ತಾರೆ.