ತ್ರಿಶೂರ್: ಗುರುವಾಯೂರು ದೇವಸ್ಥಾನದಲ್ಲಿ ಆನೆಗಳಿಗೆ ತಿಲಕವಿಡುವುದಕ್ಕೆ ನಿಷೇಧಿಸಲಾಗಿದೆ. ಮಾವುತರು ಆನೆಯ ತಲೆ, ಕಿವಿ, ಬಾಲಕ್ಕೆ ಶ್ರೀಗಂಧ, ಕಳಭಂ, ಕುಂಕುಮಗಳಿಂದ ಉಜ್ಜುತ್ತಾರೆ.
ಆನೆಗಳಿಗೆ ವಿವಿಧ ಬಣ್ಣದ ಕುಂಕುಮಾದಿ ವಸ್ತುಗಳನ್ನು ಮುಟ್ಟಿಸುವುದರಿಂದ ಹಣೆಗೆ ಬಣ್ಣ ಮಿಶ್ರಿತವಾಗಿ ಚರ್ಮ ಕೊಳೆತು ಹಣೆಗೆ ಹಾನಿಯಾಗುತ್ತಿದೆ ಎಂದು ದೇವಸ್ವಂ ಉಪನಿರ್ದೇಶಕರು ನ.17ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಈ ವಿಷಯ ತಿಳಿಸಿದ್ದಾರೆ. .
ಹಾನಿಗೊಳಗಾದ ಹಣೆಯ ಸುಸ್ಥಿತಿಗೆ 10,000 ರಿಂದ 20,000 ರೂ. ವ್ಯಯಿಸಲಾಗುತ್ತದೆ. ಇದನ್ನು ಸೂಚಿಸಿ, ಮಾವುತರಿಗೆ ಸೂಚನೆ ನೀಡಲಾಗಿದೆ. ಸೂಚನೆಯನ್ನು ಉಲ್ಲಂಘಿಸಿದರೆ, ನಷ್ಟದ ಮೊತ್ತವನ್ನು ಮಾವುತರಿಗೇ ವಿಧಿಸಲಾಗುತ್ತದೆ.
ಆನೆಗಳಿಗೆ ಸ್ನಾನ ಮಾಡಿಸಿ ಶಿವೇಲಿ ಮತ್ತು ವಿಶೇಷ ಉತ್ಸವಗಳಿಗೆ ದೇವಸ್ಥಾನಕ್ಕೆ ಕರೆತರುವುದು ಕೇರಳದ ರೂಢಿ.