ಕುಂಬಳೆ: ಗೀತೋಪದೇಶವನ್ನು ಮಾಡುವ ಮೂಲಕ ಶ್ರೀಕೃಷ್ಣ ಪರಮಾತ್ಮನು ಅರ್ಜುನನ ಮನಸ್ಸಿನ ಉದ್ವೇಗವನ್ನು ಹೋಗಲಾಡಿಸಿದ್ದಾನೆ. ದೇಶ ವಿದೇಶಗಳಲ್ಲಿಯೂ ಭಗವದ್ಗೀತೆಯು ಸಜ್ಜನರ ಮನದಲ್ಲಿ ತುಂಬಿ ಅಭಿಯಾನದ ರೂಪದಲ್ಲಿ ಪ್ರಚಲಿತದಲ್ಲಿದೆ. ಕಣಿಪುರದ ಇತಿಹಾಸದಲ್ಲಿ ವಿಶೇಷವಾದ ಕಾರ್ಯಕ್ರಮವಾಗಿ ಭಗವದ್ಗೀತೆಯ ಕನ್ನಡ ಕಾವ್ಯರೂಪ ಹೊರಬಂತು ಎಂದು ಪ್ರಸಿದ್ಧ ವಕೀಲ, ಹರಿದಾಸ ಶಂ.ನಾ. ಅಡಿಗ ಕುಂಬಳೆ ಹೇಳಿದರು.
ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಭಗವದ್ಗೀತೆಯ ಕನ್ನಡ ಕಾವ್ಯರೂಪವನ್ನು ಲೋಕಾರ್ಪಣೆಗೊಳಿಸಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾವ್ಯರೂಪದ ಸಾಹಿತಿ ಕೆ.ರಾಘವೇಂದ್ರ ಭಟ್ ದೇವಸ್ಯ ಕೋಟೆಕಾರು ಸಭೆಯನ್ನುದ್ದೇಶಿಸಿ ಮಾತನಾಡಿ, ಸಂಸ್ಕøತವನ್ನು ತಿಳಿಯದ ಜನಸಾಮಾನ್ಯರು ಭÀಗವದ್ಗೀತೆಯನ್ನು ಹೇಗೆ ಅರ್ಥೈಸಿಕೊಳ್ಳುವುದು ಎಂಬ ಚಿಂತೆ ಮನದಲ್ಲಿ ಮೂಡಿರುವುದೇ ಕನ್ನಡಾನುವಾದಕ್ಕೆ ಪ್ರೇರಣೆಯಾಯಿತು. ಸಾಹಿತ್ಯವು ಹಾಡಿನ ರೂಪದಲ್ಲಿ ಬರಬೇಕು ಎನ್ನುವ ಮನದ ಬಯಕೆ ಯುವ ಗಾಯಕಿ ಸುಮಾ ಕೋಟೆಯವರ ಮೂಲಕ ಈಡೇರಿದೆ ಎಂದರು.
ಉದ್ಯಮಿ ನಿತ್ಯಾನಂದ ನಾಯಕ್ ಮತ್ತು ನಿಖಿತಾ ನಾಯಕ್ ದಂಪತಿಗಳು ದೀಪಬೆಳಗಿಸಿ ಶುಭÀಹಾರೈಸಿದರು. ಮುಖ್ಯ ಅತಿಥಿಗಳಾಗಿ ಕೆ.ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಪಾಲ್ಗೊಂಡಿದ್ದರು. ಗಾಯನವನ್ನು ನೀಡಿದ ಸುಮಾ ಕೋಟೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹೇಶ್ ಕೋಟೆ ವಂದಿಸಿದರು.
ಭಗವದ್ಗೀತೆಯ 700 ಶ್ಲೋಕಗಳನ್ನು ಕನ್ನಡ ಕಾವ್ಯರೂಪದಲ್ಲಿ ಕೆ.ರಾಘವೇಂದ್ರ ಭಟ್ ಕೋಟೆಕಾರು ರಚಿಸಿದ್ದಾರೆ. ಪ್ರಸಿದ್ಧ ಯುವ ಗಾಯಕಿ ಸುಮಾ ಕೋಟೆ, ಪಂಜ ಸುಳ್ಯ ಇವರು ಹಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ (ಸುಮಾ ಕೋಟೆ) ಯೂಟ್ಯೂಬ್ ಚಾನೆಲ್‍ನಲ್ಲಿ ಪ್ರಸಾರವಾಗಲಿದೆ.