HEALTH TIPS

ಲೆಬನಾನ್ ಮೇಲೆ ಮುಂದುವರೆದ ಇಸ್ರೇಲ್ ದಾಳಿ: ಇಸ್ರೇಲ್ ಸೇನೆಯಿಂದ ಹಿಜ್ಬುಲ್ಲಾ ಹಿರಿಯ ನಾಯಕನ ವಶಕ್ಕೆ

Top Post Ad

Click to join Samarasasudhi Official Whatsapp Group

Qries

ಬ್ಯಾಟ್ರೌನ್: ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರೆದಿದ್ದು, ದಾಳಿ ವೇಳೆ ಇಸ್ರೇಲಿ ನೌಕಾ ಪಡೆಗಳು ಉತ್ತರ ಲೆಬನಾನ್‌ನಲ್ಲಿ ಹಿಜ್ಬುಲ್ಲಾದ ಹಿರಿಯ ನಾಯಕನೊಬ್ಬನನ್ನು ವಶಕ್ಕೆ ಪಡೆದಿದೆ ಎಂದು ಇಸ್ರೇಲಿ ಸೇನಾಪಡೆಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಉತ್ತರದ ಬ್ಯಾಟ್ರೌನ್ ಬಳಿ ಕರಾವಳಿಯಲ್ಲಿ ಬಂದಿಳಿದ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪಿನಲ್ಲಿ ಹಿಜ್ಬುಲ್ಲಾ ಹಿರಿಯ ನಾಯಕನನ್ನು ವಶಕ್ಕೆ ಪಡೆಯಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಹಿಜ್ಬುಲ್ಲಾ ಹಿರಿಯ ನಾಯಕನನ್ನು ಇಸ್ರೇಲಿ ಪ್ರದೇಶದ ಅಧಿಕಾರಿಗಳ ವಶಕ್ಕೆ ನೀಡಲಾಗಿದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ವಶದಲ್ಲಿರುವ ಹಿಜ್ಬುಲ್ಲಾ ನಾಯಕನ ಹೆಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಪ್ರಸ್ತುತ ಇಸ್ರೇಲ್ ವಶದಲ್ಲಿರುವ ವ್ಯಕ್ತಿಯ ಕುರಿತು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ. ಹಿಜ್ಬುಲ್ಲಾ ಜೊತೆಗಿನ ಈತನ ಸಂಪರ್ಕ, ಬೇಹುಗಾರಿಕೆ ಕುರಿತು ತನಖೆ ನಡೆಸಲಾಗುತ್ತಿದೆ ಎಂದು ಲೆಬನಾನ್‌ನ ಅಲ್-ಜದೀದ್ ಟಿವಿಯೊಂದಿಗೆ ಅಲ್ಲಿನ ಸಚಿವ ಅಲಿ ಹ್ಯಾಮಿ ಹೇಳಿಕೆ ನೀಡಿದ್ದಾರೆ. ಈ ನಡುವೆ ಹಿಜ್ಬುಲ್ಲಾದ ಯಾವುದೇ ಸದಸ್ಯರು ಈ ಬಗ್ಗೆ ಸ್ಪಷ್ಟನೆಗಳನ್ನು ನೀಡಿಲ್ಲ.

ಹಮಾಸ್‌ ಬಂಡುಕೋರರನ್ನು ಟಾರ್ಗೆಟ್‌ ಮಾಡಿರುವ ಇಸ್ರೇಲ್‌ ಲೆಬನಾನ್ ಮತ್ತು ಗಾಜಾ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಈ ಗ್ರಾಮದಲ್ಲಿ ಉಗ್ರ ಸಂಘಟನೆ ಹೆಜ್ಬುಲ್ಲಾಗೆ ಹೆಚ್ಚಿನ ಬೆಂಬಲವಿದೆ. ಕಳೆದ 24 ಗಂಟೆಗಳಲ್ಲಿ ಗಾಝಾದಾದ್ಯಂತ ಕನಿಷ್ಠ 55 ನಾಗರಿಕರನ್ನು ಇಸ್ರೇಲ್ ಸೇನೆ ಹತ್ಯೆ ನಡೆಸಿದೆ ಎಂದು AL JAZEERA ವರದಿ ಮಾಡಿದೆ.

ಇದಕ್ಕೂ ಮೊದಲು ದೇರ್ ಅಲ್-ಬಾಲಾಹ್, ನುಸೀರಾತ್ ಶಿಬಿರ ಮತ್ತು ಅಲ್-ಝವಾಯ್ದ ಶಿಬಿರಗಳನ್ನು ಗುರಿಯಾಗಿಸಿ ಇಸ್ರೇಲ್ ಬಾಂಬ್ ದಾಳಿ ನಡೆಸಿವೆ. ದಾಳಿಯಲ್ಲಿ ಆಸ್ಪತ್ರೆಯೊಂದಕ್ಕೆ ಹಾನಿಯಾಗಿದೆ. ಕನಿಷ್ಠ 47 ಫೆಲೆಸ್ತೀನೀಯರು ಮೃತಪಟ್ಟು, 10ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿತ್ತು.

ಲೆಬನಾನ್‌ನ ಬೆಕಾ ಕಣಿವೆಯಲ್ಲಿ ಕನಿಷ್ಠ 25 ಪಟ್ಟಣಗಳು ಮತ್ತು ಗ್ರಾಮಗಳ ಮೇಲೆ ಇಸ್ರೇಲ್ ದಾಳಿಯನ್ನು ನಡೆಸಿದೆ. ಲೆಬನಾನ್‌ನಲ್ಲಿ, ಇಸ್ರೇಲ್ ದಾಳಿಯಲ್ಲಿ ಕನಿಷ್ಠ 2,897 ಜನರು ಮೃತಪಟ್ಟಿದ್ದಾರೆ ಮತ್ತು 13,150 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries