ಬದಿಯಡ್ಕ: ಕೇರಳ ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋಹತ್ಯೆಯ ಪಾಪದ ಫಲವಾಗಿ ಪ್ರಕೃತಿಯೇ ಇಂದು ಮುನಿದಿದೆ. ಯಾವ ನಾಡಿನಲ್ಲಿ ಗೋವಿನ ಹತ್ಯೆ ನಡೆಯುತ್ತೋ ಅಲ್ಲಿ ನೆಮ್ಮದಿಯನ್ನು ಕಾಣಲು ಸಾಧ್ಯವಿಲ್ಲ. ಗೋವು ಮನುಕುಲದ ಉಳಿವಿಗಾಗಿ, ಉದ್ಧಾರಕ್ಕಾಗಿ ಸೃಷ್ಟಿಯಾಗಿದೆ ಎಂಬುದನ್ನು ನಾವು ಮರೆಯಬಾರದು ಎಂದು ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ಪುನೀತ್ ಕೆರೆಹಳ್ಳಿ ಹೇಳಿದರು.
ವಿಶ್ವಹಿಂದೂಪರಿಷತ್ ಬದಿಯಡ್ಕ ಪ್ರಖಂಡದ ವತಿಯಿಂದ ದೀಪಾವಳಿ ಪ್ರಯುಕ್ತ ಶನಿವಾರ ಸಂಜೆ ಬದಿಯಡ್ಕದಲ್ಲಿ ಜರಗಿದ ಗೋಪೂಜಾ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಗೋವಿನಿಂದ ಸಕಲ ಭಾಗ್ಯಗಳು ನಮಗೆ ಲಭಿಸುತ್ತಿದ್ದರೂ ಗೋವಿಗೆ ನಿತ್ಯ ಹತ್ಯಾ ಭಾಗ್ಯವೆಂಬುದು ಕಳವಳಕಾರಿಯಾಗಿದೆ. ಎಲ್ಲ ರೀತಿಯಲ್ಲಿ ಪ್ರಕೃತಿಯನ್ನು ವಿರೋಧಿಸುವ ಕೃತ್ಯ ನಡೆಯುತ್ತಿದೆ. ಗೋವು, ನೀರು, ಭೂಮಿಯನ್ನು ಮಾತೆಯೆಂದು ಪೂಜಿಸುವ ಸಮಾಜ ನಮ್ಮದು. ಸನಾತನ ಧರ್ಮವನ್ನು ಮರೆತು ಪ್ರಕೃತಿಯ ಮೇಲೆ ವಿಕೃತಿಯನ್ನು ಕಾಣುವ ಮನುಷ್ಯನಿಗೆ ಪ್ರಕೃತಿಯೇ ಶಿಕ್ಷೆಯನ್ನು ನೀಡುತ್ತಿದೆ. ಸನಾತನ ಧರ್ಮದ ಪ್ರತೀ ಆಚರಣೆಯಲ್ಲೂ ಅರ್ಥಗರ್ಭೀತವಾದ ಸಂದೇಶಗಳಿವೆ. ಶಾಲೆಗಳಲ್ಲಿ ಭಗವದ್ಗೀತೆ, ರಾಮಾಯಣವನ್ನು ಕಲಿಸಲು ಅವಕಾಶವಿಲ್ಲ. ಗೋವು ದೇಶೀಯ ಪ್ರಾಣಿಯಾಗಬೇಕು ಎಂಬುದೇ ನಮ್ಮ ಆಶಯ ಎಂದರು.
ಹಿರಿಯರಾದ ವಸಂತ ಪೈ ಬದಿಯಡ್ಕ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಗೋವು ಮನೆಯಲ್ಲಿದ್ದರೆ ಅಲ್ಲಿ ಓರ್ವ ವೈದ್ಯನಿದ್ದಂತೆ. ಗೋವಿನ ಉತ್ಪನ್ನವಿಲ್ಲದೆ ಜೀವನವನ್ನು ಮಾಡಲು ಸಾಧ್ಯವಿಲ್ಲ. ನಮ್ಮ ಸಂಸ್ಕøತಿಯೇ ಗೋವು ಆಗಿದೆ. ಅವರವರ ಧರ್ಮವನ್ನು ಸರಿಯಾಗಿ ಅರ್ಥೈಸಿಕೊಂಡು ಮುಂದುವರಿಯಬೇಕು ಎಂದರು.
ಭÀಜರಂಗ ದಳ ಕ್ಷೇತ್ರೀಯ ಸಂಯೋಜಕ್ ಜಿಜೇಶ್ ಪಟ್ಟೇರಿ ಮಾತನಾಡಿ, ಗೋವನ್ನು ಮಾತೆಯೆಂದು ಪ್ರೀತಿಸಿ ಪೂಜನೀಯ ಸ್ಥಾನವನ್ನು ನೀಡುವ ಸಮಾಜ ನಮ್ಮದು. ಯಾವುದೇ ಜೀವಿಗೆ ತಾಯಿಯ ಹಾಲಿಗೆ ಪರ್ಯಾಯವಾಗಿ ನೀಡುವುದು ಗೋವಿನ ಹಾಲು. ಕೇರಳದಲ್ಲಿರುವ 70 ಶೇಕಡಾ ಮಂದಿ ಗೋವಿನ ಮಾಂಸದ ಭಕ್ಷಣೆಯಲ್ಲಿ ತೊಡಗಿರುವುದೇ ನಮ್ಮ ದುಸ್ತಿತಿಗೆ ಕಾರಣವಾಗಿದೆ. ಎಲ್ಲರ ಆರಾಧÀನಾ ಸಂಸ್ಕಾರಗಳಿಗೆ ಹೊಂದಿಕೊಂಡು ಜೀವನ ಮಾಡಬೇಕು ಎಂದರು.
ಪ್ರಾಂತ ಸತ್ಸಂಗ್ ಸಹ ಸಂಯೋಜಕ್ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಜಿಲ್ಲಾ ಕಾರ್ಯದರ್ಶಿ ಯಾದವ ಕೀರ್ತೇಶ್ವರ, ಕಣ್ಣೂರು ವಿಭಾಗ್ ಸೇವಾ ಪ್ರಮುಖ್ ಸುರೇಶ್ ಪರಂಕಿಲ, ಭಜರಂಗದಳ ಪ್ರಖಂಡ ಸಂಯೋಜಕ್ ಧನ್‍ರಾಜ್ ಬದಿಯಡ್ಕ, ವಿಹಿಂಪ ಬದಿಯಡ್ಕ ಪ್ರಖಂಡ ಅಧ್ಯಕ್ಷ ಸುನಿಲ್ ಕಿನ್ನಿಮಾಣಿ ವೇದಿಕೆಯಲ್ಲಿ ಉಪಸ್ಥಿತರಿರುವರು. ಕುಂಬ್ಡಾಜೆ ಖಂಡ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ ಸ್ವಾಗತಿಸಿ, ಜಿಲ್ಲಾ ಸಹಕಾರ್ಯದರ್ಶಿ ಗಣೇಶ್ ಮಾವಿನಕಟ್ಟೆ ವಂದಿಸಿದರು. ಬದಿಯಡ್ಕ ಪ್ರಖಂಡ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರು ನಿರೂಪಿಸಿದರು. ರಕ್ಷಿತ್ ಕೆದಿಲಾಯ ಹಾಗೂ ಎಸ್.ಎಂ. ಉಡುಪ ಗೋಪೂಜೆಯನ್ನು ನೆರವೇರಿಸಿದರು. ಜಿಲ್ಲಾ ಕಾರ್ಯದರ್ಶಿ ಹರಿಪ್ರಸಾದ್ ರೈ ಹಾಗೂ ಪದಾಧಿಕಾರಿಗಳು ಮುಂದಾಳುತ್ವ ವಹಿಸಿದ್ದರು.
ನಾಡಿನ ವಿವಿಧ` ಭನಾ ಸಂಘಗಳಿಂದ ಭಜನೆ, ಕುಣಿತ ಭಜನೆಯೊಂದಿ ವಾಹನದಲ್ಲಿ ಗೋವಿನ ಆಕರ್ಷಕ ಮೆರವಣಿಗೆ ಬೋಳುಕಟ್ಟೆ ಪರಿಸರದಿಂದ ಪ್ರಾರಂಭವಾಗಿ ಬದಿಯಡ್ಕ ಪೇಟೆಯಲ್ಲಿ ಸಂಪನ್ನಗೊಂಡಿತು. ಮಾತೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.