HEALTH TIPS

ಇದು ಕೇರಳದಲ್ಲಿ ಮಾತ್ರ-ದೇವಸ್ಥಾನದ ಆವರಣದಲ್ಲಿ ವೆಲ್ಪೇರ್ ಪಕ್ಷದ ಕಾರ್ಯಕ್ರಮ; ದೇವಸ್ಥಾನ ಸಮಿತಿ ವಿಸರ್ಜನೆ

ಕಣ್ಣೂರು: ವಲಪಟ್ಣಂ ಕಲರಿವಾತುಕ್ಕಲ್ ಭಗವತಿ ದೇವಸ್ಥಾನದ ಒಳಗಡೆ ನಡೆದ ವಲ್ಪೇರ್ ಪಕ್ಷದ  ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ದೇವಾಲಯದ ಜೀರ್ಣೋದ್ಧಾರ ಸಮಿತಿಯನ್ನು ವಿಸರ್ಜಿಸಲಾಯಿತು.

ಸಮಿತಿಯ ಅಪ್ರಬುದ್ಧ ಕಾರ್ಯದ ವಿರುದ್ಧ ಹಿಂದೂ ಐಕ್ಯವೇದಿ ಸೇರಿದಂತೆ ಸಂಘಟನೆಗಳು ಪ್ರತಿಭಟನೆ ದಾಖಲಿಸಿದ ನಂತರ ಅಧಿಕಾರಿಗಳು ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು. ಜಮಾತೆ ಇಸ್ಲಾಮಿಯ ರಾಜಕೀಯ ವಿಭಾಗವಾದ ವೆಲ್ಫೇರ್ ಪಾರ್ಟಿಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ್ದ ದೇವಸ್ಥಾನ ಸಮಿತಿಯನ್ನು ಕೊನೆಗೂ ವಿಸರ್ಜಿಸಲಾಯಿತು. 

ದೇವಸ್ಥಾನದಲ್ಲಿ ಅಧಾರ್ಮಿಕ ಕಾರ್ಯಕ್ರಮ ನಡೆದ ಹಿನ್ನೆಲೆಯಲ್ಲಿ ಚಿರಯ್ಕಲ್ ಕೋವಿಲಕಂ ಕಾರ್ಯನಿರ್ವಾಹಕ ಅಧಿಕಾರಿ ದೇವಸ್ಥಾನ ಸಮಿತಿಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ. ವೆಲ್ಫೇರ್ ಪಾರ್ಟಿ ಮುಖಂಡ ಹಾಗೂ ವಳಪಟ್ಟಣ ಪಂಚಾಯತ್ 10ನೇ ವಾರ್ಡ್ ಸದಸ್ಯ ಸಮೀರಾ ನೇತೃತ್ವದಲ್ಲಿ ದೇವಸ್ಥಾನದ ಅಂಗಣದೊಳಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇವಸ್ಥಾನದ ಪ್ರಾಂಗಣದಲ್ಲಿ ದೇವಸ್ವಂ ಅನುಮತಿಯಿಲ್ಲದೆ “ವಲಪಟ್ಟಣಂ ಹೆರಿಟೇಜ್ ಜರ್ನಿ” ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವು ವಳಪಟ್ಟಣಂನ ಪಾರಂಪರಿಕ ನಗರಗಳಿಗೆ ಭೇಟಿ ನೀಡಿ ಆ ಸ್ಥಳಗಳ ಬಗ್ಗೆ ವಿವರಿಸುವುದನ್ನು ಒಳಗೊಂಡಿತ್ತು. ಇದರ ಅಂಗವಾಗಿ ವಲ್ಪೇರ್ ಪಕ್ಷದ ಸದಸ್ಯರು ದೇವಾಲಯದ ಅಂಗಣದೊಳಗೆ ಸಭೆ ನಡೆಸಿದ್ದರು.

ದೇಗುಲದೊಳಗೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬ ಬೇಡಿಕೆಯೊಂದಿಗೆ ವೆಲ್ಪೇರ್ ಪಕ್ಷದವರು ಮುಂದಾದಾಗ ದೇವಸ್ಥಾನ ಸಮಿತಿಯು ದೇವಸ್ವಂ ಅಧಿಕೃತರನ್ನು ಸಂಪರ್ಕಿಸದೆ ಅನುಮತಿ ನೀಡಿತ್ತು. ಘಟನೆಯ ನಂತರ, ವೆಲ್ಪೇರ್ ಪಕ್ಷದ ಕಾರ್ಯಕ್ರಮದ ದೃಶ್ಯಗಳು ವ್ಯಾಪಕವಾಗಿ ಪ್ರಸಾರವಾಗಿದ್ದು, ಮಾಧ್ಯಮಗಳು ಈ ಸುದ್ದಿಯನ್ನು ವರದಿ ಮಾಡಿದೆ. ಬಳಿಕ ವಳಪಟ್ಟಣಂ ಪೋಲೀಸ್ ಠಾಣೆಯಲ್ಲಿ ವಿಧಿವಿಧಾನ ಉಲ್ಲಂಘನೆ ಆರೋಪದಡಿ ದೂರು ದಾಖಲಾಗಿತ್ತು. ಮುಂದಿನ ಪ್ರಕ್ರಿಯೆಯ ಭಾಗವಾಗಿ ಸಮಿತಿಯನ್ನು ವಿಸರ್ಜಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries