ಕಾಸರಗೋಡು: ರಜಾದಿನ ಕಳೆಯಲು ದುಬೈಯ ಬೀಚ್ಗೆ ತೆರಳಿ ನೀರಲ್ಲಿ ಆಟವಾಡುವ ಮಧ್ಯೆ ಚೆಂಗಳ ನಿವಾಸಿ, ಮಹಮ್ಮದ್ ಅಶ್ರಫ್-ನಸೀಮಾ ದಂಪತಿ ಪುತ್ರ, ಅಲ್ಲಿನ ಶಾಲೆಯೊಂದರ ಹತ್ತನೇ ತರಗತಿ ವಇದ್ಯಾರ್ಥಿ ಅಹಮ್ಮದ್ ಅಬ್ದುಲ್ಲ ಮಫಾಸ್(15)ಮೃತಪಟ್ಟಿದ್ದಾನೆ.
ಮಹಮ್ಮದ್ ಅಶ್ರಫ್ ಕುಟುಂಬ ಕಳೆದ ಹಲವು ವರ್ಷಗಳಿಂದ ದುಬೈಯಲ್ಲಿ ಸಿದ್ಧುಡುಪುಗಳ ರಖಂ ವ್ಯಾಪಾರಿಯಾಗಿದ್ದರು. ಮೂರು ವರ್ಷಗಳಿಂದ ಪತ್ನಿ ಮತ್ತು ಮಕ್ಕಳೊಂದಿಗೆ ಇವರು ದಉಬೈಯಲ್ಲಿ ವಾಸ್ತವ್ಯ ಆರಂಭಿಸಿದ್ದರು. ಸಮುದ್ರದಲ್ಲಿ ಮಫಾಸ್ ಆಟವಾಡುವ ಮಧ್ಯೆ ಬಲವಾದ ಅಲೆಗೆ ಸಿಲುಕಿ ನೀರುಪಾಲಾಗಿದ್ದರೆನ್ನಲಾಗಿದೆ. ಹುಡುಕಾಟದ ಮಧ್ಯೆ ಶನಿವಾರ ಮೃತದೇಹ ಪತ್ತೆಯಾಗಿತ್ತು.