'ಭಾರತವನ್ನು ಪಿಬಿಸಿಗೆ ಮರು ಆಯ್ಕೆ ಮಾಡಲಾಗಿದೆ. ವಿಶ್ವಸಂಸ್ಥೆಯ ಶಾಂತಿಪಾಲನೆಯ ಸಂಸ್ಥಾಪಕ ಸದಸ್ಯರಾಗಿ ಮತ್ತು ಪ್ರಮುಖ ಕೊಡುಗೆದಾರರಾಗಿ, ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಪಿಸಿಬಿಯೊಂದಿಗೆ ಕೆಲಸ ಮಾಡಲು ಭಾರತ ಬದ್ಧವಾಗಿದೆ' ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಗುರುವಾರ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
ಪಿಸಿಬಿಯು 31 ಸದಸ್ಯ ರಾಷ್ಟ್ರಗಳಿಂದ ಕೂಡಿದ್ದು, ಇವು ವಿಶ್ವಸಂಸ್ಥೆಯ ಸಾಮಾನ್ಯ ಸಭೆ, ಭದ್ರತಾ ಮಂಡಳಿ, ಆರ್ಥಿಕ ಮತ್ತು ಸಾಮಾಜಿಕ ಮಂಡಳಿಗಳಿಂದ ಚುನಾಯಿತವಾಗಿರುತ್ತವೆ. ವಿಶ್ವಸಂಸ್ಥೆಗೆ ಹೆಚ್ಚಿನ ಆರ್ಥಿಕ ಕೊಡುಗೆ ನೀಡುವ ದೇಶಗಳು ಮತ್ತು ಶಾಂತಿಪಾಲನಾ ಪಡೆಗೆ ಉನ್ನತ ಕೊಡುಗೆ ನೀಡುವ ರಾಷ್ಟ್ರಗಳು ಕೂಡ ಸದಸ್ಯತ್ವ ಹೊಂದಿರುತ್ತವೆ.
ಶಾಂತಿ ನಿರ್ಮಾಣ ಆಯೋಗವು ಅಂತರರಾಷ್ಟ್ರೀಯ ಸಲಹಾ ಸಂಸ್ಥೆಯಾಗಿದ್ದು, ಸಂಘರ್ಷ ಪೀಡಿತ ದೇಶಗಳಲ್ಲಿ ಶಾಂತಿ ಸ್ಥಾಪಿಸುವ ಪ್ರಯತ್ನಗಳನ್ನು ಬೆಂಬಲಿಸುತ್ತದೆ.