ಬದಿಯಡ್ಕ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶ ಹಾಗೂ ಮೂಡಪ್ಪಸೇವೆಯ ವಿಜ್ಞಾಪನಾ ಪತ್ರದಲ್ಲಿ ಮದನಂತೇಶ್ವರ ಒಲಿದ ಮೊಗೇರ ಸಮುದಾಯದ ಮದರು ಮಾತೆಯ ಹೆಸರನ್ನು ಉಲ್ಲೇಖಿಸದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿಯ ನಿಯೋಗದ ವತಿಯಿಂದ ಸಂಬಂಧಪಟ್ಟ ಸಮಿತಿಗೆ ಲಿಖಿತ ಮನವಿಯನ್ನು ಸಲ್ಲಿಸಲಾಯಿತು.
ನಿಯೋಗದಲ್ಲಿ ಜಿಲ್ಲಾ ಅಧ್ಯಕ್ಷ ಬೇಡು ಎ.ಪಿ., ಐ ಲಕ್ಷ್ಮಣ ಪೆರಿಂಯಡ್ಕ, ಕೆ.ಕೆ.ಸ್ವಾಮಿಕೃಪಾ, ರಮೇಶ ಬನ್ನೂರು, ರಾಘವನ್ ಉದುಮ, ಗಣೇಶ ಸಿ.ಕೆ., ಭಾಸ್ಕರ ಕಾಳ್ಯಂಗಾಡು, ಪದ್ಮನಾಭ ಚೇನೆಕ್ಕೋಡು ಜೊತೆಗೂಡಿ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಸರ್ಕಾರದ ಪ್ರತಿನಿಧಿಗಳಾದ ಕಾರ್ಯನಿರ್ವಹಣಾಧಿಕಾರಿಗಳಿಗೆ ನೀಡಲಾಯಿತು. ಅವರು ಮುಂಬರುವ ಆಮಂತ್ರಣ ಪತ್ರಿಕೆಗಳಲ್ಲಿ ವಿಷಯವನ್ನು ಪರಿಗಣಿಸುವುದಾಗಿ ಭರವಸೆ ನೀಡಿದರು.