ಇಂಫಾಲ: ಜಿರೀಬಾಮ್ ಗುಂಡಿನ ದಾಳಿ ಪ್ರಕರಣ ಸಂಬಂಧ ಮಣಿಪುರ ಸರ್ಕಾರವು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನೆಕ್ಟರ್ ಸಂಜೆನ್‌ಬಮ್ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದೆ.
ಇಂಫಾಲ: ಜಿರೀಬಾಮ್ ಗುಂಡಿನ ದಾಳಿ ಪ್ರಕರಣ ಸಂಬಂಧ ಮಣಿಪುರ ಸರ್ಕಾರವು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನೆಕ್ಟರ್ ಸಂಜೆನ್‌ಬಮ್ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದೆ.
ಭಾನುವಾರ ರಾತ್ರಿ ನಡೆದ ಗುಂಡಿನ ದಾಳಿಯ ಕಾರಣ ಪತ್ತೆ ಮಾಡಲು ಸರ್ಕಾರವು ಇಬ್ಬರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಿದೆ.
ಸರ್ಕಾರ ರಚಿಸಿರುವ ಸಮಿತಿಯ ನೇತೃತ್ವವನ್ನು ಐಜಿಪಿ (ಗುಪ್ತಚರ) ಕೆ. ಕಬೀಬ್ ವಹಿಸಿದ್ದು, ಡಿಐಜಿ (ಶ್ರೇಣಿ III) ನಿಂಗ್ಸೆನ್ ವೋರ್ನ್‌ಗಮ್ ಸದಸ್ಯರಾಗಿದ್ದಾರೆ. ಈ ಸಮಿತಿಯು ಗುಂಡಿನ ದಾಳಿಗೆ ಕಾರಣವಾದ ಅಂಶಗಳ ಕುರಿತು ತನಿಖೆ ನಡೆಸಲಿದೆ. ಅಧಿಕಾರಿಗಳು ಸೇರಿದಂತೆ ಯಾವುದೇ ವ್ಯಕ್ತಿಯಿಂದ ಅಪರಾಧ ಸಂಭವಿಸಿದೆಯೇ ಎಂಬುದನ್ನು ಪತ್ತೆಹಚ್ಚಲಿದೆ. ಸಮಿತಿಗೆ 30 ದಿನಗಳಲ್ಲಿ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ.