ಅಮರಾವತಿ: ರಜಾಕಾರರ ದಾಳಿಯಿಂದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಾಯಿ ಮತ್ತು ಸಹೋದರಿ ಕಳೆದುಕೊಂಡರು. ಆದರೆ, ಮಸ್ಲಿಂ ಮತಗಳನ್ನು ಕಳೆದುಕೊಳ್ಳುವ ಭಯದಿಂದ ಈ ದುರಂತದ ಬಗ್ಗೆ ಬಾಯಿಬಿಡುತ್ತಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಂಗಳವಾರ ವಾಗ್ದಾಳಿ ನಡೆಸಿದರು.

ಮಹಾರಾಷ್ಟ್ರದ ಅಮರಾವತಿಯಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 'ಖರ್ಗೆ ಅವರು ರಾಜಕೀಯ ಲಾಭಕ್ಕಾಗಿ ತಮ್ಮ ವೈಯಕ್ತಿಕ ಬದುಕಿನ ನೋವನ್ನು ಅದುಮಿಡುತ್ತಿದ್ದಾರೆ' ಎಂದು ಆರೋಪಿಸಿದರು.
ಕಾಂಗ್ರೆಸ್, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಐತಿಹಾಸಿಕ ದೌರ್ಜನ್ಯಗಳನ್ನೇ ಉಪೇಕ್ಷಿಸುತ್ತಿದೆ ಎಂದು ಟೀಕಿಸಿದರು.
'ಹೈದರಾಬಾದ್ ನಿಜಾಮನ ಸೇನಾಪಡೆಯಾದ ರಜಾಕಾರರು, ಖರ್ಗೆ ಅವರ ಗ್ರಾಮವಾದ ವರವಟ್ಟಿಯನ್ನು ಭಸ್ಮ ಮಾಡಿದರು. ಈ ದಾಳಿಯಲ್ಲಿ ಖರ್ಗೆ ಅವರ ತಾಯಿ ಮತ್ತು ಸಹೋದರಿ ಮೃತಪಟ್ಟರು. ನಿಜಾಮರ ಪಡೆಗಳಿಂದಾದ ದೌರ್ಜನ್ಯದ ಬಗ್ಗೆ ಮಾತನಾಡಿದರೆ ಮುಸ್ಲಿಮರ ಮತಗಳನ್ನು ಕಳೆದುಕೊಳ್ಳಬಹುದು ಎಂಬ ಭಯದಲ್ಲಿ ಅವರು ಈ ಸತ್ಯವನ್ನು ತಮ್ಮೊಳಗೆ ಅದುಮಿಟ್ಟುಕೊಂಡಿದ್ದಾರೆ' ಎಂದು ಹೇಳಿದರು.
'ಕಾಂಗ್ರೆಸ್ ನಾಯಕತ್ವವು 1946ರಲ್ಲಿ ಮುಸ್ಲಿಂ ಲೀಗ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತು. ಪರಿಣಾಮ ದೇಶದ ವಿಭಜನೆಯಾಯಿತು ಮತ್ತು ಹಿಂದೂಗಳನ್ನು ಹತ್ಯೆಗೈಯಲಾಯಿತು' ಎಂದು ಆರೋಪಿಸಿದರು.
'ನಮ್ಮಲ್ಲಿ ಒಗ್ಗಟ್ಟು ಇಲ್ಲದಿದ್ದರೆ ನಮ್ಮ ಹೆಣ್ಣುಮಕ್ಕಳಿಗೆ ಸುರಕ್ಷತೆ ಇರುವುದಿಲ್ಲ, ದೇಗುಲಗಳ ಮೇಲೆ ದಾಳಿಗಳಾಗಬಹುದು ಮತ್ತು ಸಮುದಾಯವನ್ನು ಗುರಿ ಮಾಡಬಹುದು' ಎಂದು ಒತ್ತಿ ಹೇಳಿದರು.