ವಾಟ್ಸ್ಆಯಪ್ ನಲ್ಲಿ ಅನೇಕ ಉಪಯುಕ್ತ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ, ಆದರೆ ಫೋನ್ ವೇಗವನ್ನು ನಿಧಾನಗೊಳಿಸುವ ಕೆಲವು ವೈಶಿಷ್ಟ್ಯಗಳು ಇದರಲ್ಲಿ ಅಡಕವಾಗಿದೆ. ವಾಟ್ಸ್ಆಯಪ್ ನಿಮ್ಮ ಫೋನ್‌ನ ಸ್ಟೋರೇಜ್ ಅನ್ನು ತಿನ್ನುತ್ತದೆ, ಇದರಿಂದಾಗಿ ಸ್ಟೋರೇಜ್ ತುಂಬಿದಾಗ ಫೋನ್ ನಿಧಾನಗೊಳ್ಳಲು ಪ್ರಾರಂಭಿಸುತ್ತದೆ.
ನಿಮ್ಮ ಸ್ಮಾರ್ಟ್ಫೋನ್ನ ವೇಗವು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸಿದೆಯೆ?. ಇದರಿಂದಾಗಿ ನೀವು ಚಿಂತೆ ಮಾಡುತ್ತಿದ್ದೀರಾ?. ಫೋನ್ ನಿಧಾನಗತಿಯ ವೇಗದ ಹಿಂದೆ ಹಲವು ಕಾರಣಗಳಿದ್ದರೂ, ಇದಕ್ಕೆ ಮುಖ್ಯ ಕಾರಣವೆಂದರೆ ವಾಟ್ಸ್ಆಯಪ್ ಎಂದರೆ ನಂಬಲೇಬೇಕು. ವಾಟ್ಸ್ಆಯಪ್ ಫೋನ್ ವೇಗವನ್ನು ಹೇಗೆ ಕಡಿಮೆ ಮಾಡುತ್ತದೆ ಎಂದು ಯೋಚಿಸುತ್ತಿದ್ದೀರಾ?, ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಸಹಜವಾಗಿ, ವಾಟ್ಸ್ಆಯಪ್ ನಲ್ಲಿ ಅನೇಕ ಉಪಯುಕ್ತ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ, ಆದರೆ ಫೋನ್ ವೇಗವನ್ನು ನಿಧಾನಗೊಳಿಸುವ ಕೆಲವು ವೈಶಿಷ್ಟ್ಯಗಳು ಇದರಲ್ಲಿ ಅಡಕವಾಗಿದೆ. ವಾಟ್ಸ್ಆಯಪ್ ನಿಮ್ಮ ಫೋನ್‌ನ ಸ್ಟೋರೇಜ್ ಅನ್ನು ತಿನ್ನುತ್ತದೆ, ಇದರಿಂದಾಗಿ ಸ್ಟೋರೇಜ್ ತುಂಬಿದಾಗ ಫೋನ್ ನಿಧಾನಗೊಳ್ಳಲು ಪ್ರಾರಂಭಿಸುತ್ತದೆ.
ವಾಟ್ಸ್ಆಯಪ್ ನ ಸೆಟ್ಟಿಂಗ್‌ಗಳಲ್ಲಿ ಸ್ಟೋರೇಜ್ ಮತ್ತು ಡೇಟಾ ಎಂಬ ಆಯ್ಕೆ ಇದೆ, ಈ ವೈಶಿಷ್ಟ್ಯದ ಸಹಾಯದಿಂದ ಅಪ್ಲಿಕೇಶನ್ ಎಷ್ಟು ಸಂಗ್ರಹಣೆಯನ್ನು ಬಳಸುತ್ತಿದೆ ಎಂದು ತಿಳಿಯುತ್ತದೆ? ನಿಮ್ಮ ಸ್ಟೋರೇಜ್ ಅನ್ನು ಯಾವ ಚಾಟ್ ಹೆಚ್ಚು ಬಳಸುತ್ತಿದೆ ಎಂಬುದನ್ನು ಇಲ್ಲಿ ನೀವು ಚಾಟ್-ವಾರು ನೋಡುತ್ತೀರಿ.
ಇದಕ್ಕೆ ಪರಿಹಾರ ಕೂಡ ಇದೆ. ನೀವು ಸ್ಟೋರೇಜ್ ಮತ್ತು ಡೇಟಾಗೆ ಹೋಗಿ ಮತ್ತು ವೈಯಕ್ತಿಕ ಚಾಟ್‌ಗಳನ್ನು ತೆರೆಯುವ ಮೂಲಕ ಡೇಟಾವನ್ನು ಅಳಿಸಬಹುದು. ಅಳಿಸಿದ ನಂತರ, ಸ್ಟೋರೇಜ್ ಕಡಿಮೆ ಆಗಲು ಪ್ರಾರಂಭಿಸುತ್ತದೆ ಮತ್ತು ಫೋನ್‌ನ ವೇಗವು ಸುಧಾರಿಸಲು ಪ್ರಾರಂಭಿಸುತ್ತದೆ.
ಇದಲ್ಲದೆ, ವಾಟ್ಸ್ಆಯಪ್ ನಲ್ಲಿ ಫೋನ್‌ನ ಸ್ಟೋರೇಜ್ ತುಂಬುವ ಮತ್ತೊಂದು ವೈಶಿಷ್ಟ್ಯವೂ ಇದೆ. ಈ ವೈಶಿಷ್ಟ್ಯದ ಹೆಸರು ಮೀಡಿಯಾ ವಿಸಿಬಿಲಿಟಿ. ನಿಮ್ಮ ವಾಟ್ಸ್ಆಯಪ್ ನಲ್ಲಿ ಈ ವೈಶಿಷ್ಟ್ಯವು ಆನ್ ಆಗಿದ್ದರೆ, ವಾಟ್ಸ್ಆಯಪ್ ನಲ್ಲಿ ನೀವು ಸ್ವೀಕರಿಸುವ ಎಲ್ಲ ಫೋಟೋ, ವಿಡಿಯೋ, ಡಾಕ್ಯುಮೆಂಟ್ ಫೋನ್‌ನ ಗ್ಯಾಲರಿಯಲ್ಲಿ ಸೇವ್ ಆಗುತ್ತದೆ. ಹೀಗಾದಾಗ ಫೋನ್‌ನ ಸ್ಟೋರೇಜ್ ತುಂಬಲು ಪ್ರಾರಂಭಿಸುತ್ತದೆ ಮತ್ತು ಫೋನ್ ನಿಧಾನವಾಗುತ್ತದೆ.
ಪರ್ಸನ್ ಮತ್ತು ಗ್ರೂಪ್ ಚಾಟ್‌ಗಳಲ್ಲಿ ಕೂಡ ನೀವು ಈ ವೈಶಿಷ್ಟ್ಯವನ್ನು ಆಫ್ ಮಾಡಬಹುದು. ಇದಕ್ಕಾಗಿ ಪರ್ಸನ್ ಚಾಟ್ ತೆರೆಯಿರಿ ಮತ್ತು ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡುವ ಮೂಲಕ ಕಾಂಟೆಕ್ಟ್ ವೀಕ್ಷಿಸಿ, ಇಲ್ಲಿ ನೀವು ಮೀಡಿಯಾ ವಿಸಿಬಿಲಿಟಿ ಆಯ್ಕೆಯನ್ನು ನೋಡುತ್ತೀರಿ. ನೀವು ಇಲ್ಲಿಂದ ಈ ವೈಶಿಷ್ಟ್ಯವನ್ನು ಆಫ್ ಮಾಡಬಹುದು, ನೀವು ಗ್ರೂಪ್ ಚಾಟ್‌ಗಾಗಿ ಕೂಡ ಇದೇ ಪ್ರಕ್ರಿಯೆಯನ್ನು ಅನುಸರಿಸಬಹುದು.
ಇಂದು 16GB, 32GB, 128GB ಮೆಮೊರಿ ಹೊಂದಿರುವ ಸ್ಮಾರ್ಟ್ಫೋನುಗಳು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB, 128GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್ ನಿಂದಾಗಿ ಫೋನುಗಳು ನಿಧಾನವಾಗುತ್ತವೆ. ಅಂತೆಯೆ ಫೋನ್ನಲ್ಲಿರುವ ಅಪ್ಲಿಕೇಷನ್ಗಳನ್ನು ತೆರೆದಂತೆ ಮೊಬೈಲ್ನಲ್ಲಿ ಅದು ಸ್ಟೋರ್ ಆಗುತ್ತಾ ಹೋಗುತ್ತದೆ.
ನಮ್ಮ ಮೊಬೈಲ್ನಲ್ಲಿರುವ ಕೆಲವು ಅಪ್ಲಿಕೇಷನ್ಗಳನ್ನು ನಾವು ಬಳಸುವುದೇ ಇಲ್ಲ. ಆದರೂ ಅದು ನಮ್ಮ ಮೊಬೈಲ್ ನಲ್ಲಿ ಇರುತ್ತದೆ. ಇಂತಹ ಅಪ್ಲಿಕೇಷನ್ಗಳು ಸುಮ್ಮನೆ ಸ್ಟೋರೇಜ್ ಸಮಸ್ಯೆ ಉಂಟುಮಾಡುತ್ತವೆ. ಹಾಗಾಗಿ ಅಂತಹ ಅಪ್ಲಿಕೇಷನ್ಗಳನ್ನು ಮೊದಲು ಅನ್‌ಇನ್‌ಸ್ಟಾಲ್ ಮಾಡಿ.