ಬದಿಯಡ್ಕ: ಮಾವಿನಕಟ್ಟೆ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮಿ ಭಜನ ಮಂದಿರದ 43ನೇ ವಾರ್ಷಿಕೋತ್ಸವವು ಬುಧವಾರ ಪ್ರಾತಃಕಾಲ ಮಹಾಗಣಪತಿ ಹೋಮದೊಂದಿಗೆ ಪ್ರಾರಂಭವಾಯಿತು. ಅಯ್ಯಪ್ಪ ವ್ರತಧಾರಿಗಳು ಮುದ್ರಾಧಾರಣೆ ಮಾಡಿದರು. ನಂತರ ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಿತು. ರಾತ್ರಿ 8 ಕ್ಕೆ ಸತ್ಯನಾರಾಯಣ ಪೂಜೆ, ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ. ರಾತ್ರಿ ನಾಟ್ಯನಿಲಯಂ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಇವರ ಶಿಷ್ಯವೃಂದದವರಿಂದ ನಾಟ್ಯ ವೈವಿಧ್ಯ,. ರಾತ್ರಿ ಅನ್ನದಾನ ನಡೆಯಿತು.