HEALTH TIPS

ಆಲಿವ್ ರಿಡ್ಲಿ ಆಮೆಗಳ ಸಂರಕ್ಷಣೆ: ಒಡಿಶಾ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ

Top Post Ad

Click to join Samarasasudhi Official Whatsapp Group

Qries

 ಕೇಂದ್ರಪಾರ: ಆಲಿವ್ ರಿಡ್ಲಿ ಜಾತಿಗೆ ಸೇರಿದ ಕಡಲಾಮೆಯ ವಾರ್ಷಿಕ ಸಂರಕ್ಷಣಾ ಕಾರ್ಯಕ್ರಮದ ಅಂಗವಾಗಿ ಒಡಿಶಾ ಸರ್ಕಾರವು ಶುಕ್ರವಾರ ಢಮಾರಾ, ದೇವಿ ನದಿಯ ಮುಖಾಂತರ ಕರಾವಳಿಯ 20 ಕಿ.ಮೀ. ವ್ಯಾಪ್ತಿಯಲ್ಲಿ ಮೀನುಗಾರಿಕೆ ಚಟುವಟಿಕೆಯನ್ನು ಏಳು ತಿಂಗಳ ಕಾಲ ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೀನುಗಾರಿಕೆ ನಿಷೇಧವು ನವೆಂಬರ್ 1ರಿಂದ 2025ರ ಮೇ 31 ರವರೆಗೆ ಜಾರಿಯಲ್ಲಿರುತ್ತದೆ. ಆಲಿವ್ ರಿಡ್ಲಿ ಆಮೆಗಳ ಸಂತಾನೋತ್ಪತ್ತಿ ಅವಧಿಯಲ್ಲಿ ಅವುಗಳ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಢಮಾರಾ, ದೇವಿ ನದಿಯ ಮುಖಾಂತರ ಕರಾವಳಿಯ 20 ಕಿ.ಮೀ. ವ್ಯಾಪ್ತಿಯಲ್ಲಿ ಒಡಿಶಾ ಸಮುದ್ರ ಮೀನುಗಾರಿಕೆ ನಿಯಂತ್ರಣ ಕಾಯ್ದೆ (ಒಎಂಎಫ್‌ಆರ್‌ಎ), 1972 ಮತ್ತು 1982ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಬಂಧನೆ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಮೀನುಗಾರಿಕೆ ಬಲೆಗಳಿಗೆ ಸಿಲುಕಿ ಅಥವಾ ಮೀನುಗಾರಿಕೆ ದೋಣಿಯ ಪ್ರೊಪೆಲ್ಲರ್‌ಗಳಿಗೆ ಸಿಲುಕಿ ಆಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಶವಾಗುವುದರಿಂದ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರಾವಳಿ ಕಾವಲು ಸಿಬ್ಬಂದಿಯ ಜತೆಗೆ ಅರಣ್ಯ, ಮೀನುಗಾರಿಕೆ ಮತ್ತು ಪೊಲೀಸರು ಗಸ್ತು ತಿರುಗುವಿಕೆಯಲ್ಲಿ ಭಾಗವಹಿಸಲಿದ್ದು, ಇವರಿಗಾಗಿ ವನ್ಯಜೀವಿ ವಿಭಾಗಗಳಾದ ಭದ್ರಕ್, ರಾಜನಗರ, ಪುರಿ ಮತ್ತು ಬೆರ್ಹಾಂಪುರದಲ್ಲಿ ಶಿಬಿರಗಳನ್ನು ಸ್ಥಾಪಿಸಲಾಗಿದೆ.

ಮೀನುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಸುಮಾರು 10,666 ಮೀನುಗಾರರ ಕುಟುಂಬಗಳು ತೊಂದರೆಗೊಳಗಾಗಲಿವೆ. ಆದ್ದರಿಂದ ನಷ್ಟವನ್ನು ಸರಿದೂಗಿಸಲು ರಾಜ್ಯ ಸರ್ಕಾರವು ಸಂತ್ರಸ್ತ ಮೀನುಗಾರರ ಕುಟುಂಬಗಳಿಗೆ ₹7,500 ನೆರವು ನೀಡಲು ನಿರ್ಧರಿಸಿದೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries