ಕಾಸರಗೋಡು: ಕಾಞಂಗಾಡ್ ಸನಿಹದ ಪುದಿಯಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೇತೃತ್ವದಲ್ಲಿ 'ಪಠ್ಯದಲ್ಲಿ ಬೇಸಾಯ' ಯೋಜನೆಯನ್ವಯ ಶಾಲಾ ವಠಾರದಲ್ಲಿ ನಡೆಸಲಾಗಿದ್ದ ಭತ್ತದ ಗದ್ದೆಯಲ್ಲಿನ ಕೊಯ್ಲು ಉತ್ಸವ ನಡೆಸಲಾಯಿತು.
ಶಾಲಾ ವಿದ್ಯಾರ್ಥಿಗಳ ಪೆÇೀಷಕರು, ಶಿಕ್ಷಕರು ಹಾಗೂ ಸ್ಥಳೀಯರು ಕೊಯ್ಲು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಅಜನೂರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಶೋಭಾ ಕೊಯ್ಲು ಉತ್ಸವಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯ ಮಧು.ಎಂ.ವಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷ ಸಬೀಶ್, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಬಾ ಉಮ್ಮರ್, ಬೇಕಲ ಉಪಜಿಲ್ಲಾ ಶಿಕ್ಷಣಾಧಿಕಾರಿ ಅರವಿಂದ.ಕೆ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉಮಾದೇವ್ ಶಂಕರ್, ಮಾತೃಪಿಟಿಎ ಉಪಾಧ್ಯಕ್ಷೆ ಉಮಾದೇವಿ, ಸೀಡ್ ಸಂಯೋಜಕ ರಾಘವನ್ ಮಾಸ್ಟರ್, ಮುಖ್ಯಶಿಕ್ಷಕಿ ಶೋಭಾ.ಕೆ, ಎಸ್.ಆರ್.ಜಿ. ಸಂಚಾಲಕಿ ದಿವ್ಯಾ.ಪಿ ್ಟುಪಸ್ಥಿತರಿದ್ದರು. ಕಾರ್ಯಖ್ರಮದ ನಂತರ ಹೆತ್ತವರು, ಅಧ್ಯಾಪಕರು ಹಾಗೂ ಊರವರು ಸೇರಿ ಕೊಯ್ಲು ಉತ್ಸವದಲ್ಲಿ ಪಾಲ್ಗೊಂಡರು.