HEALTH TIPS

ಎಡನೀರುಶ್ರೀಗಳ ವಾಹನದ ಮೇಲೆ ದಾಳಿ ಖಂಡಿಸಿ ಬೃಹತ್ ಪ್ರತಿಭಟನೆ: ದುಷ್ಕರ್ಮಿಗಳ ಬಂಧಿಸದಿದ್ದರೆ ಪರಿಸ್ಥಿತಿ ಬೇರೆಹಾದಿಯತ್ತ- ಹಿಂದೂ ಐಕ್ಯವೇದಿ ಜಿಲ್ಲಾಧ್ಯಕ್ಷ ಎಸ್.ಪಿ.ಸಜಿ

ಮುಳ್ಳೇರಿಯ: ಹಿಂದೂ ಧಾರ್ಮಿಕ ಕೇಂದ್ರಗಳು,ಸನ್ಯಾಸಿಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಗಳು ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸುವಂತಿದೆ. ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲೇ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ವಾಹನ ಮೇಲಾದ ಆಕ್ರಮಣ ಖಂಡನೀಯವಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಅಧಿಕೃತರು ಮುಂದಾಗದಿರುವುದು ಕ್ಷಮ್ಯವಲ್ಲ ಎಂದು ಹಿಂದೂ ಐಕ್ಯವೇದಿ ಕಾಸರಗೋಡು ಜಿಲ್ಲಾಧ್ಯಕ್ಷ ಎಸ್ ಪಿ ಸಜಿ ಆರೋಪಿಸಿದರು.

ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳನ್ನು ಗುರಿಯಾಗಿಸಿ ಅವರ ವಾಹನದ ಮೇಲಾದ ಆಕ್ರಮಣ ಖಂಡಿಸಿ ಹಿಂದೂ ಐಕ್ಯವೇದಿ, ವಿ.ಹಿಂ.ಪ ಸಹಿತ ಸಂಘಪರಿವಾರ ಸಂಘಟನೆಗಳು ಮಂಗಳವಾರ ಸಂಜೆ ಬೋವಿಕ್ಕಾನ ಪೇಟೆಯಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಪ್ರಜಾಪ್ರಭುತ್ವದ ಕಾವಲುಗಾರರೆಂದು ಸ್ವಯಂ ಘೋಷಿಸಿಕೊಂಡು ಕೇರಳದ ಆಡಳಿತ ಚುಕ್ಕಾಣಿ ಹಿಡಿದಿರುವ ಮಹಾನ್ ಪಕ್ಷವೆಂದು ಬಿಂಬಿಸುವವರೇ ಅನ್ಯಾಯ-ಅಕ್ರಮದ ಹಾದಿಹಿಡಿದು ಸಾಮಾಜಿಕ ಅಶಾಂತಿಗೆ ತೊಡಗಿಕೊಂಡಿದ್ದಾರೆ. ನಾಡಿನ ಜನತೆ, ಕೇರಳದಾತ್ಯಂತ ಮಹತ್ತರ ಸ್ಥಾನ ಹೊಂದಿರುವ ಶಂಕರ ಪೀಠಾಧಿಪತಿಯಾದ ಎಡನೀರು ಶ್ರೀಗಳಿಗೆ ರಕ್ಷಣೆಯೊದಗಿಸಬೇಕಾದವರೇ ನಡೆದ ಅಕ್ರಮವನ್ನು ಮರೆಮಾಚಲು ಹವಣಿಸಿದ್ದು ಬಳಿಕದ ಬೆಳವಣಿಗೆ ತೋರಿಸುತ್ತದೆ. 1200 ವರ್ಷಗಳ ಇತಿಹಾಸವಿರುವ ಎಡನೀರು ಮಠಾಧೀಶರಿಗಾದ ಅವಮಾನ-ಅವರಿಗೆದುರಾಗಿ ನಿರ್ಮಿಸಿದ ಭೀತಿ ಸೃಷ್ಟಿ ತೀವ್ರ ಕಳವಳಕಾರಿ. ಸರ್ಕಾರ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಸೂಕ್ತಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಬೇರೆಹಾದಿಯತ್ತ ಹೊರಳುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ವಿ ಎಚ್ ಪಿ ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ, ಆರ್.ಎಸ್.ಎಸ್. ಜಿಲ್ಲಾ ಸಂಘ ಚಾಲಕ್ ಪ್ರಭಾಕರ ಮಾಸ್ತರ್, ಜಿಲ್ಲಾ  ಕಾರ್ಯವಾಹ್ ಪವಿತ್ರನ್ ಉಪಸ್ಥಿತರಿದ್ದು ಮಾತನಾಡಿ ಘಟನೆಯನ್ನು ಖಂಡಿಸಿ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದರು. 

ಬ್ರಾಹ್ಮಣ ಪರಿಷತ್ ಜಿಲ್ಲಾಧ್ಯಕ್ಷ ವಿಠಲ ಭಟ್, ವಿಹಿಂಪ ಖಂಡ ಸಹಯೋಜಕ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಮುಖಂಡರಾದ ಗಣೇಶ್ ಮಾವಿನಕಟ್ಟೆ, ವಾಮನ ಆಚಾರ್ಯ, ನವೀನ್ ಕುಮಾರ್, ಭಟ್, ಸೀತಾರಾಮ ಬಳ್ಳುಳ್ಳಾಯ, ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ, ದಕ್ಷಿಣ ಕನ್ನಡದ ಹಿಂದೂ ಮುಖಂಡರಾದ ಅರುಣ್ ಪುತ್ತಿಲ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಭಟನಾ ಸಭೆಗೂ ಮೊದಲು ಬೋವಿಕ್ಕಾನ ಪೇಟೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಶ್ರೀದೇವರ ನಾಮಜಪದೊಂದಿಗೆ ಶಾಂತಿಯುತವಾಗಿ ನಡೆದ ಮೆರವಣಿಗೆಯಲ್ಲಿ 500 ಕ್ಕೂ ಹೆಚ್ಚು ಜನರು ಭಾಗವಹಿಸಿದರು. ಹಿಂದೂ ಐಕ್ಯವೇದಿ ಮುಖಂಡ ರಾಜನ್ ಮುಳಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries