ಕೊಚ್ಚಿ: ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ವಿದೇಶಿ ವ್ಯಕ್ತಿಯೊಬ್ಬರು ಕೊಚ್ಚಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಹಾಕ್ಕಾಗಿ ಬಂದಿದ್ದ ಐರ್ಲೆಂಡ್ ಪ್ರಜೆ ಹೊಲವೆಂಕೊ (74) ಅವರು ಫೋರ್ಟ್ ಕೊಚ್ಚಿಯಲ್ಲಿರುವ ತಮ್ಮ ವಾಸ್ತವ್ಯ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಿನ್ನೆ ಅವರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿತ್ತು.
ಹತ್ತು ದಿನಗಳ ಹಿಂದೆ ಪ್ರವಾಸಕ್ಕಾಗಿ ಕೊಚ್ಚಿಗೆ ಬಂದಿದ್ದರು. ಕೇರಳದ ಹಲವೆಡೆ ಪ್ರವಾಸ ಮಾಡಿ ಹೊಲವೆಂಕೋ ಅವರು ಕೊಚ್ಚಿ ತಲುಪಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ಶನಿವಾರ ಅವರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಮೃತದೇಹವನ್ನು ಅವರ ದೇಶಕ್ಕೆ ಒಯ್ಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.