ತ್ರಿಶೂರ್: ಕಲಾಮಂಡಲಂ ಕಲ್ಪಿತ ವಿಶ್ವವಿದ್ಯಾನಿಲಯವು ಸಂಪೂರ್ಣ ವಿಶ್ವವಿದ್ಯಾನಿಲಯವಾಗುವ ಭಾಗವಾಗಿ ಲಿಬರಲ್ ಆಟ್ರ್ಸ್ ಶಾಲೆಯನ್ನು ಪ್ರಾರಂಭಿಸಲಾಗುವುದು.
ಪದವಿಪೂರ್ವ ಕೋರ್ಸ್‍ಗಳ ಜೊತೆಗೆ ಮೋಹಿನಿಯಾಟ್ಟಂ, ಹಾಡುಗಾರಿಕೆ, ಕಥಕ್ಕಳಿ, ವಾದ್ಯ ಸಂಗೀತದಂತಹ ಕಲಾ ವಿಷಯಗಳನ್ನೂ ಕಲಿಯಬಹುದು. ಉದ್ಯೋಗಾವಕಾಶಗಳೂ ಹೆಚ್ಚುತ್ತವೆ. ಕಲಾಮಂಡಲದ ಕುಲಪತಿ ಮಲ್ಲಿಕಾ ಸಾರಾಭಾಯಿ, ಸಹಕುಲಪತಿ ಡಾ. ಬಿ. ಅನಂತಕೃಷ್ಣನ್ ಸರ್ಕಾರಕ್ಕೆ ಈ ಬಗ್ಗೆ ಯೋಜನೆ ನೀಡಿದ್ದು, ಶೀಘ್ರ ಅನುಮೋದನೆ ಲಭಿಸಲಿದೆ ಎಂದು ತಿಳಿದುಬಂದಿದೆ. ರಾಜಸ್ಥಾನದ ಅಮಿಟಿ ಮತ್ತು ಹರಿಯಾಣದ ಅಶೋಕ ಮುಂತಾದ ಖಾಸಗಿ ವಿಶ್ವವಿದ್ಯಾಲಯಗಳು ಇಂತಹ ಕೋರ್ಸ್‍ಗಳನ್ನು ಯಶಸ್ವಿಯಾಗಿ ನಡೆಸುತ್ತಿವೆ. ಮುಂದಿನ ವರ್ಷ ನಾಲ್ಕು ವರ್ಷಗಳ ಪದವಿ ಕೋರ್ಸ್ ಆರಂಭಿಸುವ ಯೋಜನೆಯೂ ಇದೆ.
ಕಲಾಮಂಡಲಂ ಕಲ್ಪಿತ ವಿಶ್ವವಿದ್ಯಾನಿಲಯವನ್ನು ಪೂರ್ಣಪ್ರಮಾಣದ ವಿಶ್ವವಿದ್ಯಾನಿಲಯವನ್ನಾಗಿ ಮಾಡಲು ಶಾಸನಸಭೆಯಲ್ಲಿ ಮಂಡಿಸಲಿರುವ ಕಾಯಿದೆಯ ಕರಡನ್ನು ಸಂಸ್ಕøತಿ ಇಲಾಖೆ ಸಿದ್ಧಪಡಿಸುತ್ತಿದೆ. ಶೈಕ್ಷಣಿಕ ವಿಷಯಗಳು ಸೇರಿದಂತೆ ಕಾಯ್ದೆಯಲ್ಲಿ ಸೇರಿಸಬೇಕಾದ ಪ್ರಸ್ತಾವನೆಗಳ ರೂಪುರೇಷೆಗಳನ್ನು ಎರಡು ವಾರಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು.
ಕಟ್ಟಡಗಳು ಸೇರಿದಂತೆ ಕಲಾ ಮಂಡಲದ ವಿಶಿಷ್ಟತೆ ಹೊಸ ವ್ಯವಸ್ಥೆಯಿಂದ ಹಾನಿಗೊಳ್ಳದು. ಇದಕ್ಕಾಗಿ ಮಾಜಿ ವಿಸಿ ಎಂ.ವಿ. ನಾರಾಯಣನ್, ಮಾಜಿ ಪ್ರಾಂಶುಪಾಲ ಎಂ.ಪಿ.ಎಸ್.ನಂಬೂದಿರಿ ಮತ್ತು ತಜ್ಞರನ್ನು ಸಮಿತಿಯಾಗಿ ರಚಿಸಲಾಯಿತು.
ಕಲಾಮಂಡಲಂ ವ್ಯಾಪ್ತಿಯಲ್ಲಿ ಸುಮಾರು 25 ಎಕರೆ ಜಮೀನು ಲಭಿಸಿರುವ ಬಗ್ಗೆ ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿದೆ.