ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿಯ ನೇತೃತ್ವದಲ್ಲಿ ಮಾಲಿನ್ಯ ಮುಕ್ತ ನವ ಕೇರಳ ಜನಕೀಯ ಜಾಗೃತಿ ಅಭಿಯಾನದ ಅಂಗವಾಗಿ ಮಕ್ಕಳ ಹಸಿರು (ಹರಿತ) ಸಭೆ ಎಂಬ ಸ್ಯಾಸ್ಥ್ಯ ಸಂಕಲ್ಪದ ವಿನೂತನ ಕಾರ್ಯಕ್ರಮ ಪಂಚಾಯತು ಸಭಾಂಗಣದಲ್ಲಿ ಶನಿವಾರ ಜರಗಿತು.
ಗ್ರಾ.ಪಂ.ಅಧ್ಯಕ್ಷ ಸೋಮಶೇಖರ ಜೆ ಎಸ್ ಉದ್ಘಾಟಿಸಿದರು. ಮನ್ವಿತ್ ಕೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಚಂದ್ರನಾಥ ಪಿ ಅವರು ಹಸಿರು ಸಭೆಯ ಮಂಡನೆಗೈದರು. ವಿಸ್ಮಿತಾ ಡಿ ಹಸಿರು ಸಭೆಯ ಉದ್ದೇಶಗಳನ್ನು ತಿಳಿಸಿದರು. ಸಾತ್ವಿಕ ಕಾರ್ಯಕ್ರಮದ ರೂಪುರೇಷೆ ಮಂಡನೆಗೈದರು.
ಈ ಸಂದರ್ಭದಲ್ಲಿ ಪಂಚಾಯತಿ ವ್ಯಾಪ್ತಿಯ ವಿವಿಧ ಶಾಲೆಗಳಿಂದ ಆಗಮಿಸಿದ ಹಸಿರು ಪ್ರತಿನಿಧಿಗಳಾದ ವಿದ್ಯಾರ್ಥಿಗಳು ಸ್ವಚ್ಚತೆ,ಮಾಲಿನ್ಯ ನಿರ್ವಹಣೆಯ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರಮ್ಲ ಇಬ್ರಾಹಿಂ, ಮಂಜೇಶ್ವರ ಬ್ಲಾಕ್ ಪಂ.ಸದಸ್ಯ ಅನಿಲ್ ಕುಮಾರ್ ಕೆ ಪಿ. ಪಂ.ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಾಬಿ ಹನೀಫ್, ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಶುಚಿತ್ವ ಮಿಷನ್ ಸಂಪನ್ಮೂಲ ವ್ಯಕ್ತಿ ಸುಗಂಧಿ ಎಂ. ಮೊದಲಾದವರು ಮಾತನಾಡಿದರು.ಮಹಮ್ಮದ್ ಮನಾರ್ ಸ್ವಾಗತಿಸಿ, ಕಜಂಪಾಡಿ ಶಾಲಾ ಶಿಕ್ಷಕ ಕಮಲಾಕ್ಷ ನಾಯಕ್ ನಿರೂಪಿಸಿದರು.