HEALTH TIPS

ಸ್ವಾಮೀಜಿ ವಾಹನದ ಮೇಲೆ ದಾಳಿ ನಡೆಸಿದವರ ಬಂಧಿಸದಿದ್ದಲ್ಲಿ ಬಿಜೆಪಿಯಿಂದ ಬಹಿರಂಗ ಹೋರಾಟ

ಕಾಸರಗೋಡು: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ವಾಹನದ ಮೇಲೆ ದಾಳಿ ನಡೆಸಿದವರ ವಿರುದ್ಧ ಕೇಸು ದಾಖಲಿಸಿ ಅವರನ್ನು ಬಂಧಿಸದಿರುವ ಪೊಲೀಸರ ಕ್ರಮ ದೌರ್ಭಾಗ್ಯಕರ ಎಂಬುದಾಗಿ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ವಕೀಲ ಕೆ. ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನೂರಾರು ವರ್ಷಗಳ ಇತಿಹಸ ಹೊಮದಿರುವ ಶಂಕರಾಚಾರ್ಯ ಪರಂಪರೆಯ ಸ್ವಾಮೀಜಿಯೊಬ್ಬರ ವಾಹನದ ಮೇಲೆ ದಳಿ ನಡೆಸಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದು ಪೊಲೀಸ್ ಇಲಖೆಯ ಗಂಭೀರ ವೈಫಲ್ಯವಾಗಿದೆ. ರಾಜ್ಯಮಟ್ಟದ ಸೈಕ್ಲಿಂಗ್ ಚಾಂಪ್ಯನ್‍ಶಿಪ್ ನಡೆಸುವ ಮಧ್ಯೆ ಉದ್ದೇಶಪೂರ್ವಕವಾಗಿಯೇ ಸ್ವಾಮೀಜಿಗೆ ಅಪಾಯ ತಂದೊಡ್ಡುವ ಪ್ರಯತ್ನ ನಡೆಸಲಾಗಿದೆ. ಸ್ಪರ್ಧೆ ನಡೆಸುವ ಸಂದರ್ಭ ಕಾನೂನು ಗಾಳಿಗೆತೂರಿ ರಸ್ತೆ ತಡೆ ನಡೆಸಲಾಗಿದೆ.ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರು ಇತ್ತ ಮುಖಮಾಡಿರಲಿಲ್ಲ. ದೂರು ನೀಡಿದರೂ, ಆರೋಪಿಗಳ ವಿರುದ್ಧ ಕೇಸು ದಆಖಲಿಸದೆ, ಅವರನ್ನು ಬಂಧಿಸುವ ಕಾರ್ಯಕ್ಕೂ ಮುಂದಾಗದಿರುವುದು ಖಂಡನೀಯ. ಸ್ವಾಮೀಜಿಯವರ ಪ್ರಯಾಣಕ್ಕೂ ತಡೆಯೊಡ್ಡಿರುವುದರಿಂದ ಸ್ವಾಮೀಜಿ ಹಾಗೂ ಎಡನೀರು ಮಠ ಭದ್ರತಾ ಬೆದರಿಕೆ ಎದುರಿಸುವಂತಾಗಿದೆ. ಈ ಮಧ್ಯೆ ಎಡನೀರು ಸ್ವಾಮೀಜಿ ಅವರು ಪ್ರಯಾಣಿಸುವಾಗ ಬೆಲೆಬಾಳುವ ಚಿನ್ನ ಮತ್ತು ಇತರ ವಸ್ತುಗಳನ್ನು  ಜತೆಗೆ ಕೊಂಡೊಯ್ಯುತ್ತಿದ್ದಾರೆ ಎಂಬುದಾಗಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅವರು ಸಾಮಾಜಿಕಜಾಲತಾಣಗಳಮೂಲಕ ನೀಡಿರುವ ಹೇಳಿಕೆ ದುರಾದೃಷ್ಟಕರ.  ಸಂಸದರ ಈ ರೀತಿಯ ಪ್ರಚಾರದಿಂದ  ಬೆದರಿಕೆ ಹಚ್ಚಾಗಿದೆ. ಇದರಿಂದ ಸ್ವಾಮೀಜಿ ಹಾಗೂ ಶ್ರೀಮಠಕ್ಕೆ ಹೆಚ್ಚಿನ ಭದ್ರತೆ ಒದಗಿಸಬೇಕಾಗಿದೆ. ಶ್ರೀಮಠದಲ್ಲಿ ಪರವಾನಗಿ ಹೊಂದಿದ ಬಂದೂಕನ್ನು ನವೀಕರಣೆ ಹೆಸರಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿರಿಸಲಾಗಿದ್ದು, ಇದನ್ನು ನವೀಕರಿಸಿ ನೀಡದಿರುವುದು ಖಂಡನೀಯ. 

ಕಾಸರಗೋಡು ಜಿಲ್ಲೆ ಸೇರಿದಂತೆ ಉತ್ತರ ಕೇರಳದಲ್ಲಿ ಹಿಂದೂ ಆರಾಧನಾಲಯಗಳನ್ನು ಕೇಂದ್ರೀಕರಿಸಿ ದರೋಡೆ, ಕಳವು ಪ್ರಕ್ರಿಯೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ದೇವಾಲಯಗಳ ರಕ್ಷಣೆಗೆ ಪೊಲೀಸ್ ಇಲಾಖೆಯಲ್ಲಿ ವಿಶೇಷ ತಂಡ ರಚನೆಯಾಗಬೇಕು.   ಹಿಂದೂ ಸಮುದಾಯವನ್ನು ತುಚ್ಛವಾಗಿ ಕಾಣುವುದನ್ನು ಸರ್ಕಾರ ಕೊನೆಗೊಳಿಸಬೇಕು. ಸ್ವಾಮೀಜಿ ವಾಹನದ ಮೇಲೆ ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿಯಿಂದ ಬಹಿರಂಗ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷೆ ಸುಧಾಮ ಗೋಸಾಡ, ಬದಿಯಡ್ಕ ಮಂಡಲ ಸಮಿತಿ ಅಧ್ಯಕ್ಷ ಎಂ.ಗೋಪಾಲಕೃಷ್ಣ ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries