ಮಂಜೇಶ್ವರ: ಮೀಂಜ ಗ್ರಾಮ ಪಂಚಾಯತಿ ಮಾದರಿ ಕುಟುಂಬಶ್ರಿ ಯ ಐ ಸಿ ಡಿ ಯಸ್ ನ ನೇತೃತ್ವದಲ್ಲಿ ಬಾಲಸಭೆ ಮಕ್ಕಳ ಬಾಲಸಂಗಮ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮೀಂಜ ಪಂಚಾಯತಿ ಕುಟುಂಬಶ್ರಿ ಅಧ್ಯಕ್ಷೆ ಶಾಲಿನಿ ಬಿ ಶೆಟ್ಟಿ ನೆರವೇರಿಸಿ ಮಾತನಾಡಿ, ಮಕ್ಕಳ ಸೃಜನಾತ್ಮಕ ಚಿಂತನೆಗಳನ್ನು ಬೆಳೆಸಲು ಹಾಗೂ ಅದನ್ನು ಪ್ರಕಟಪಡಿಸಲು ವೇದಿಕೆಯನ್ನು ನೀಡುತ್ತದೆ. ಇದರಲ್ಲಿ ಭಾಗವಹಿಸಿದವರು ಉತ್ತಮ ಪ್ರಜೆಗಳಾಗಿ ಬದುಕಲು ಪ್ರೇರಣೆ ನೀಡುತ್ತದೆ.ಆದ್ದರಿಂದ ಬಾಲಸಭೆಯಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಹೆಚ್ಚು ಹೆಚ್ಚು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿ.ಡಿ. ಎಸ್ ಉಪಾಧ್ಯಕ್ಷೆ ಲತಾ ದೇವಿ, ಬಾಲಸಭೆ ಆರ್ ಪಿ ಜಯಲಕ್ಷ್ಮಿ ಶೆಟ್ಟಿ , ಸಂಪನ್ಮೂಲ ವ್ಯಕ್ತಿ ಅಶೋಕ್ ಕೊಡ್ಲಮೊಗರು, ಸಿ.ಡಿ.ಎಸ್ ಸದಸ್ಯರಾದ ಯಶೋದಾ, ಪವಿತ್ರ, ಶ್ರೀದೇವಿ, ಸೀತಾ, ನಸೀಮಾ ಮೊದಲಾದವರು ಉಪಸ್ಥಿತರಿದ್ದರು. ಶಮಿನ ಸ್ವಾಗತಿಸಿ, ಪದ್ಮಜಾ ವಂದಿಸಿದರು. ನಂತರ ಸಂಪನ್ಮೂಲ ವ್ಯಕ್ತಿ ಅಶೋಕ್ ಕೊಡ್ಲಮೊಗರು ಅವರಿಂದ ವಿವಿಧ ಆಟಗಳ ಜೊತೆಗೆ ಮಾನಸಿಕ ಒತ್ತಡವನ್ನು ನಿಯಂತ್ರಿಸುವ ತರಗತಿ ನಡೆಸಿಕೊಟ್ಟರು. ಕುಟುಂಬಶ್ರಿ ಸದಸ್ಯರು ಸಹಕರಿಸಿದರು.