ಕಾಸರಗೋಡು: ಕಾಸರಗೋಡಿನ ಕನ್ನಡಿಗರ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕು, ಕನ್ನಡಿಗರ ಉದ್ಯೋಗ ಮೀಸಲಾತಿ ಇಲ್ಲದಾಗಿಸಲು ನಡೆಸುವ ಹುನ್ನಾರ ಕೊನೆಗಾಣಿಸಬೇಕು, ಕನ್ನಡ ಪ್ರದೇಶದ ಅಂಗನವಾಡಿಗಳಲ್ಲಿ ಕನ್ನಡದ ಅಧ್ಯಾಪಿಕೆಯರನ್ನು ನೇಮಿಸಬೇಕು, ಕನ್ನಡ ಅರ್ಜಿಗಳಿಗೆ ಕನ್ನಡದಲ್ಲೇ ತೀರ್ಪು ಕಲ್ಪಿಸುವ ಅವಕಾಶ ನೀಡಬೇಕು ಇತ್ಯಾದಿ 21 ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಕರ್ನಾಟಕ ಸಮಿತಿಯ ನೇತೃತ್ವದಲ್ಲಿ ನವಂಬರ್ 1ರಂದು ಸಿದ್ಧಪಡಿಸಿ, ನವಂಬರ್ 7 ರಂದು ಜಿಲ್ಲಾಧಿಕಾರಿಯವರ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಯವರಿಗೆ ಕರ್ನಾಟಕ ಸಮಿತಿಯ ಅಧ್ಯಕ್ಷ ನ್ಯಾಯವಾದಿ.ಕೆ.ಎಂ. ಬಳ್ಳಕ್ಕುರಾಯ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟೆತ್ತೋಡಿ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಟಿ. ಶಂಕರನಾರಾಯಣ ಭಟ್ ಇವರನ್ನು ಒಳಗೊಂಡ ನಿಯೋಗವು ಅರ್ಪಿಸಿತು. ಸತ್ಯನಾರಾಯಣ ತಂತ್ರಿ ಕಾರ್ಯಕ್ರಮ ಆಯೋಜಿಸಿದ್ದರು.