HEALTH TIPS

ಕೇರಳಕ್ಕೆ ಬರಲಿದ್ದಾರೆ ಲೆಜೆಂಡರಿ ಮೆಸ್ಸಿ- ಅರ್ಜೆಂಟೀನಾ ಫುಟ್ಬಾಲ್ ಸಂಸ್ಥೆಯ ಅನುಮತಿ ಪಡೆದಿರುವುದಾಗಿ ಸಚಿವ ಅಬ್ದುಲ್ ರೆಹಮಾನ್

ಕೋಝಿಕ್ಕೋಡ್: 2025ರಲ್ಲಿ ಮೆಸ್ಸಿ ಮತ್ತು ಅವರ ತಂಡ ಕೇರಳ ತಲುಪಲಿದೆ. ಅಜೆರ್ಂಟೀನಾ ತಂಡ ಎರಡು ಪಂದ್ಯಗಳನ್ನು ಆಡಲಿದೆ. ಕತಾರ್ ಮತ್ತು ಜಪಾನ್‍ನಂತಹ ಏಷ್ಯಾದ ತಂಡಗಳನ್ನು ಎದುರಾಳಿಗಳಾಗಿ ಪರಿಗಣಿಸಲಾಗಿರುವುದರಿಂದ ಕೊಚ್ಚಿಗೆ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಕ್ರೀಡಾ ಸಚಿವ ವಿ.ಅಬ್ದುಲ್ ರಹಮಾನ್ ತಿಳಿಸಿದ್ದಾರೆ.

ತಂಡದ ಕೇರಳ ಭೇಟಿಗೆ ಸಂಬಂಧಿಸಿದಂತೆ ಸ್ಪೇನ್‍ನಲ್ಲಿರುವ ಅಜೆರ್ಂಟೀನಾ ಫುಟ್‍ಬಾಲ್ ಸಂಸ್ಥೆಯೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಅಜೆರ್ಂಟೀನಾ ಫುಟ್ಬಾಲ್ ಸಂಸ್ಥೆಯ ಪದಾಧಿಕಾರಿಗಳು ಹೆಚ್ಚಿನ ಚರ್ಚೆಗಾಗಿ ಒಂದೂವರೆ ತಿಂಗಳೊಳಗೆ ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಸ್ಪರ್ಧೆಯ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.


ಅಜೆರ್ಂಟೀನಾ ತಂಡದ ಭೇಟಿಗೆ ಸಂಬಂಧಿಸಿದ ಹಣಕಾಸಿನ ವೆಚ್ಚವನ್ನು ಪ್ರಾಯೋಜಿಸಲು ಕೇರಳದ ವ್ಯಾಪಾರ ಸಮುದಾಯವು ಇಚ್ಛೆ ವ್ಯಕ್ತಪಡಿಸಿದೆ ಎಂದು ಸಚಿವರು ಹೇಳಿದರು. ಕೇರಳ ಚಿನ್ನ ಮತ್ತು ಬೆಳ್ಳಿ ವ್ಯಾಪಾರಿಗಳ ಸಂಘ ಮತ್ತು ಕೇರಳದ ವ್ಯಾಪಾರಿಗಳು ಮತ್ತು ಉದ್ಯಮಿಗಳ ಸಮನ್ವಯ ಸಮಿತಿಯು ಜಂಟಿಯಾಗಿ ಬೆಂಬಲ ನೀಡಲಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಸಾರ್ವಜನಿಕವಾಗಿ ಮಾಡಲಾಗುವುದು ಮತ್ತು ಸರ್ಕಾರವು ನಿಮ್ಮೊಂದಿಗೆ ಇರುತ್ತದೆ. ಇಂತಹ ಜನಪ್ರಿಯ ಫುಟ್ಬಾಲ್ ಈವೆಂಟ್ ಅನ್ನು ಬೆಂಬಲಿಸಿದ್ದಕ್ಕಾಗಿ ಕೇರಳ ಸ್ಪೋಟ್ರ್ಸ್ ಫೌಂಡೇಶನ್ ಪರವಾಗಿ ವ್ಯಾಪಾರ ಸಮುದಾಯಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಚಿವರು ಹೇಳಿರುವರು.

ರಾಜ್ಯದಲ್ಲಿ ಕ್ರೀಡೆಗೆ ಇನ್ನಷ್ಟು ಉತ್ತೇಜನ ನೀಡಿ ಕ್ರೀಡಾ ಆರ್ಥಿಕತೆಯನ್ನು ಬೆಳೆಸುವ ಉದ್ದೇಶದಿಂದ ಅಜೆರ್ಂಟೀನಾ ತಂಡವನ್ನು ಕೇರಳಕ್ಕೆ ಆಹ್ವಾನಿಸಲಾಗಿದೆ ಎಂದು ಸಚಿವರು ತಿಳಿಸಿದರು. ಕೆಲ ತಿಂಗಳ ಹಿಂದೆ ಕ್ರೀಡಾ ಶೃಂಗಸಭೆಯನ್ನೂ ಆಯೋಜಿಸಲಾಗಿತ್ತು. ಇದರ ಬೆನ್ನಲ್ಲೇ ಸುಮಾರು ಐದು ಸಾವಿರ ಕೋಟಿ ರೂಪಾಯಿ ಹೂಡಿಕೆಯನ್ನು ಈಗಾಗಲೇ ಪಡೆದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಕೇರಳ ಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ ಶರಫಾಲಿ, ಕೇರಳ ಉದ್ಯಮಿಗಳ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ರಾಜು ಅಪ್ಸರಾ, ಉಪಾಧ್ಯಕ್ಷ ಧನೀಷ್ ಚಂದ್ರನ್, ಆಲ್ ಕೇರಳ ಚಿನ್ನ ಬೆಳ್ಳಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಜಸ್ಟಿನ್ ಪಲಾತ್ರ, ಲೈಮ್ಯಾಕ್ಸ್ ಜಾಹೀರಾತು ವ್ಯವಸ್ಥಾಪಕ ನಿರ್ದೇಶಕ ಮುಜೀಬ್ ಶಂಶುದ್ದೀನ್, ಸಿಂಗಲ್ ಐಡಿ ನಿರ್ದೇಶಕ ಸುಭಾಷ್ ಮ್ಯಾನುವೆಲ್ ಘೋಷಣೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries