ಪೆರ್ಲ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಲ ಸನಿಹದ ಕುದ್ವದಲ್ಲಿ ವಿದ್ಯುತ್ ತಂತಿಯಿಂದ ಶಾಕ್ ತಗುಲಿ ಹದಿನೇಳರ ಬಾಲಕಿ, ವಿದ್ಯಾರ್ಥಿನಿ ದಾರುಣವಾಗಿ ಮೃತಪಟ್ಟಿದ್ದು, ಈಕೆಯ ತಾಯಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಇಲ್ಲಿನ ನಿವಾಸಿ ಇಸ್ಮಾಯಿಲ್-ಅವ್ವಮ್ಮ ದಂಪತಿ ಪುತ್ರಿ ಫಾತಿಮಾ(17)ಮೃತಪಟ್ಟ ವಿದ್ಯಾರ್ಥಿನಿ. ಮನೆ ಟೆರೇಸ್ ಮೇಲೆ ಒಗೆದ ಬಟ್ಟೆ ಆರಲು ಹಾಕಿದ್ದ ಹಗ್ಗದ ನಡುವಿಗೆ ಅಳವಡಿಸಿದ್ದ ಕಬ್ಬಿಣದ ಸಲಾಕೆ ಮನೆ ಸಮೀಪ ಹಾದುಹೋಗಿದ್ದ ಎಚ್ಟಿ ವಿದ್ಯುತ್ ತಂತಿ ಮೇಲೆಬಿದ್ದು ಶಾಕ್ ತಗುಲಿದೆ. ಶಬ್ದ ಕೇಳಿ ಟೆರೇಸ್ಗೆ ಹತ್ತಿ ಬಂದು ಪುತ್ರಿಯನ್ನು ರಕ್ಷಿಸಲು ಮುಂದಾದ ತಾಯಿ ಅವ್ವಮ್ಮ ಅವರಿಗೂ ಶಾಕ್ ತಗುಲಿದ್ದು, ಗಾಯಗೊಂಡ ಇವರನ್ನು ಚೆಂಗಳದ ಸಹಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ.
ಎಚ್ಟಿ ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಮೂರು ತಂತಿಗಳಲ್ಲಿ ಒಂದು ತಂತಿ ಟೆರೇಸ್ ಸನಿಹ ಜೋತುಕೊಂಡ ಸ್ಥಿತಿಯಲ್ಲಿದ್ದು, ಇದೇ ತಂತಿಗೆ ಕಬ್ಬಿಣದ ಸಲಾಕೆ ಸ್ಪರ್ಶಿಸಿ ಶಾಕ್ ತಗುಲಿದೆ ಎನ್ನಲಾಗಿದೆ.