HEALTH TIPS

ಕಾಲರ್ ಐಡಿ ಮಾಹಿತಿಯನ್ನು ನಂಬಬೇಡಿ: ಸರ್ಕಾರಿ ಅಧಿಕಾರಿಗಳಿಗೆ ಸೈಬರ್ ಮಾರ್ಗಸೂಚಿ

         ವದೆಹಲಿ: ಫೋನ್ ಕರೆಯ ವೇಳೆ ಕಾಣಿಸಿಕೊಳ್ಳುವ ಮಾಹಿತಿಯನ್ನು ನಂಬದಂತೆ ಸರ್ಕಾರಿ ಅಧಿಕಾರಿಗಳಿಗೆ ರಾಷ್ಟ್ರೀಯ ಮಾಹಿತಿ ವಿಜ್ಞಾನ ಕೇಂದ್ರವು (ಎನ್‌ಐಸಿ) ಎಚ್ಚರಿಕೆ ನೀಡಿದೆ. ಗೋಪ್ಯ, ವೈಯಕ್ತಿಕ ಮಾಹಿತಿಯನ್ನು ಕದಿಯುವ ಸಲುವಾಗಿ ಕೃತ್ರಿಮ ಧ್ವನಿ ಬಳಸಿ ಮೋಸ ಮಾಡುವ (ವಿಶಿಂಗ್‌) ಜಾಲ ಹೆಚ್ಚಾಗಿದ್ದರಿಂದ ಈ ಎಚ್ಚರಿಕೆ ನೀಡಿದೆ.

 ‌       ಸರ್ಕಾರದ ಹಿರಿಯ ಅಧಿಕಾರಿಗಳು, ಕಾನೂನು ಜಾರಿ ಸಂಸ್ಥೆಗಳು ಅಥವಾ ತಾಂತ್ರಿಕ ಬೆಂಬಲ ಸಿಬ್ಬಂದಿ ಎಂದು ಹೇಳಿಕೊಂಡು ಬಲೆಗೆ ಕೆಡವುವ ಸಾಧ್ಯತೆ ಇದೆ ಎಂದು ಎನ್‌ಐಸಿ ಹೇಳಿದೆ.

ಅಲ್ಲದೇ ಇದು ‍ಪ್ರಮುಖವಾದ ಅರಿಕೆ ಎಂದು ಅದು ತಿಳಿಸಿದೆ.

        ಕಾಲರ್‌ ಐಡಿ ಮಾಹಿತಿಯನ್ನು ತಿದ್ದುಪಡಿ ಮಾಡಿ, ಸರ್ಕಾರಿ ಸಂಖ್ಯೆಯಿಂದ ಕರೆ ಬರುತ್ತಿದೆ ಎನ್ನುವ ರೀತಿ ಬಿಂಬಿಸುತ್ತಾರೆ ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.

         ಈ ಟಿಪ್ಪಣಿಯನ್ನು ಹಲವು ಸರ್ಕಾರಿ ಕಚೇರಿಗಳಿಗೆ, ಸಚಿವಾಲಯಗಳಿಗೆ ಕಳುಹಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ, ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಗೋಪ್ಯ ಮಾಹಿತಿಯನ್ನು ಕದಿಯಲು ಮತ್ತು ಸರ್ಕಾರದ ಅಧಿಕೃತ ಮಾಹಿತಿಗೆ ಕನ್ನ ಹಾಕುವ ದಾಳಿಯ ಪ್ರಮಾಣ ಹೆಚ್ಚಾಗಿದೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

         ವಿಶಿಂಗ್ ಅಥವಾ ವಾಯ್ಸ್-ಫಿಶಿಂಗ್ ಸಾಮಾಜಿಕ ಇಂಜಿನಿಯರಿಂಗ್ ದಾಳಿಯಾಗಿದ್ದು, ಇದರಲ್ಲಿ ಮೋಸಗಾರರು ಹಣಕಾಸಿನ ವಿವರದಂತಹ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳಲು ವ್ಯಕ್ತಿಗಳನ್ನು ಮನವೊಲಿಸುತ್ತಾರೆ. ಇದಕ್ಕಾಗಿ ದೂರವಾಣಿ ಕರೆಗಳು ಅಥವಾ ಧ್ವನಿ ಸಂದೇಶಗಳನ್ನು ಬಳಸುತ್ತಾರೆ.

ತುರ್ತು ಸಂದೇಶ ಎಂದು ಹೇಳಿ ನಂಬಿಸುತ್ತಾರೆ. ನೀವು ಉತ್ತರಿಸದಿದ್ದರೆ, ಅದರಿಂದ ಗಂಭೀರ ಪರಿಣಾಮಗಳನ್ನು ಎದುರಿಸುತ್ತೀರಿ ಎಂದು ಭಯ ಬೀಳಿಸುತ್ತಾರೆ. ಗೊಂದಲಕ್ಕೀಡು ಮಾಡಲು ಅಥವಾ ಭಯಪಡಿಸಲು ಸಂಕೀರ್ಣ ತಾಂತ್ರಿಕ ಭಾಷೆ ಬಳಸುತ್ತಾರೆ. ಈ ವೇಳೆ ಅವರ ವಂಚನೆಯ ಬಲೆಗೆ ಬೀಳುವ ಸಾಧ್ಯತೆ ಇರುತ್ತದೆ ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.

            ಕಾಲರ್ ಐಡಿ ಮಾಹಿತಿಯನ್ನು ಸುಲಭವಾಗಿ ತಿರುಚಬಹುದು ಎಂದು ಒತ್ತಿ ಹೇಳಲಾಗಿದ್ದು. ಸರ್ಕಾರಿ ಅಧಿಕಾರಿಗಳು ಇಂತಹ ತಂತ್ರಗಳ ವಿರುದ್ಧ ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ನೀಡಿದೆ.

ಕಾಲರ್‌ ಐಡಿಯಲ್ಲಿ ಕೇವಲ ಸಂಖ್ಯೆ ಮಾತ್ರ ಇದ್ದರೆ ನಂಬಬೇಡಿ. ಅಧಿಕೃತ ಏಜೆನ್ಸಿಯನ್ನು ಪ್ರತಿನಿಧಿ ಎಂದು ಹೇಳಿಕೊಂಡು ಮಾಡುವ ಕರೆಗಳ ಬಗ್ಗೆ ಅಧಿಕೃತ ದಾಖಲೆಗಳೊಂದಿಗೆ ಪರಿಶೀಲಿಸಿ. ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಎಚ್ಚರ ವಹಿಸಿ ಎಂದಿದೆ.

           ವೈಯಕ್ತಿಕ ಅಥವಾ ಗೋಪ್ಯ ಮಾಹಿತಿಯನ್ನು ಕೇಳುವ ಯಾವುದೇ ಅನಪೇಕ್ಷಿತ ಕರೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕರೆ ಮಾಡುವವರು ನಿಮ್ಮನ್ನು ಒತ್ತಡಕ್ಕೆ ಸಿಲುಕಿಸಲು ಬಳಸುವ ತಂತ್ರದ ಬಗ್ಗೆ ಗಮನಹರಿಸಿ. ಅನುಮಾನಾಸ್ಪದ ಕರೆಯ ಮಾಹಿತಿಯನ್ನು ಪರಿಶೀಲಿಸಲು ಸಮಯ ತೆಗೆದುಕೊಳ್ಳಿ ಎಂದು ಸಲಹೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries