ತಿರುವನಂತಪುರಂ: ಹಿಂದೂ ಐಎಎಸ್ ಅಧಿಕಾರಿಗಳನ್ನೊಳಗೊಂಡ ವಾಟ್ಸಾಪ್ ಗ್ರೂಪ್ ರಚನೆ ವಿವಾದಕ್ಕೆ ಸಂಬಂಧಿಸಿದಂತೆ ಪೋಲೀಸರು ತನಿಖೆ ಮುಂದುವರೆಸಿದ್ದಾರೆ.
ಗ್ರೂಪ್ ಅಡ್ಮಿನ್ ಹಾಗೂ ಕೈಗಾರಿಕಾ ಇಲಾಖೆ ನಿರ್ದೇಶಕ ಕೆ.ಗೋಪಾಲಕೃಷ್ಣನ್ ಅವರ ಹೇಳಿಕೆಯನ್ನು ತನಿಖಾ ತಂಡ ದಾಖಲಿಸಿಕೊಂಡಿದೆ.
ತನ್ನ ಪೋನ್ ಹ್ಯಾಕ್ ಆಗಿದ್ದು, ಸ್ನೇಹಿತರು ಹೇಳಿದಾಗ ಮಾತ್ರ ವಿಷಯ ತಿಳಿಯಿತು ಎಂದು ಗೋಪಾಲಕೃಷ್ಣನ್ ಹೇಳಿಕೆ ನೀಡಿದ್ದಾರೆ. ಗೋಪಾಲಕೃಷ್ಣನ್ ಅವರ ಫೆÇೀನ್ ಅನ್ನು ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೋನ್ ಪೋರೆನ್ಸಿಕ್ ಪರೀಕ್ಷೆಯ ಫಲಿತಾಂಶದ ನಂತರವೇ ಹೆಚ್ಚಿನ ಸ್ಪಷ್ಟತೆ ಸಿಗಲಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಗ್ರೂಪ್‍ಗೆ ಸಂಬಂಧಿಸಿದ ವಿವರಗಳನ್ನು ಕೋರಿ ಪೋಸರು ವಾಟ್ಸಾಪ್‍ಗೆ ಎರಡು ಪತ್ರಗಳನ್ನು ಕಳುಹಿಸಿದ್ದಾರೆ. ಇದಕ್ಕೆ ಸಿಗುವ ಉತ್ತರ ಆಧರಿಸಿ ಮುಂದಿನ ತನಿಖೆ ನಡೆಯಲಿದೆ.
ಆದರೆ ಗೋಪಾಲಕೃಷ್ಣನ್ ಪೋನ್ ಫಾಮ್ರ್ಯಾಟ್ ಮಾಡಿ ಪೆÇಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪೋನ್ ಹ್ಯಾಕ್ ಆಗಿದೆಯೇ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ ಎಂದು ಮೆಟಾ ಮಾಹಿತಿ ನೀಡಿದೆ.
ಹಿಂದೂ ಐಎಎಸ್ ಅಧಿಕಾರಿಗಳೊಂದಿಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಲ್ಲದೆ, ಮುಸ್ಲಿಂ ಐಎಎಸ್ ಅಧಿಕಾರಿಗಳೊಂದಿಗೆ ವಾಟ್ಸಾಪ್ ಗ್ರೂಪ್ ಕೂಡ ರಚಿಸಲಾಗಿದೆ. ಅದರ ಅಡ್ಮಿನ್ ಕೂಡ ಗೋಪಾಲಕೃಷ್ಣನ್ ಆಗಿದ್ದರು.