ಕಾಸರಗೋಡು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾಸರಗೋಡು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ 'ಮಕ್ಕಳ ಹಕ್ಕುಗಳ ಸಪ್ತಾಹ-2024' ರ ಅಂಗವಾಗಿ ಜಿಲ್ಲೆಯ ಹೈಯರ್ ಸೆಕೆಂಡರಿ ಶಾಲಾ ಮಕ್ಕಳಿಗಾಗಿ ರೀಲ್ಸ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. 'ಮಕ್ಕಳ ಮೇಳಿನ ಲೈಂಗಿಕ ದೌರ್ಜನ್ಯ, ಮಾನಸಿಕ-ದೈಹಿಕ ಹಿಂಸಾಚಾರವನ್ನು ತಡೆಯುವುದು ಹೇಗೆ ಎಂಬ ಬಗ್ಗೆ ಮಕ್ಕಳ ದೃಷ್ಟಿಕೋನ'ಎಂಬ ವಿಷಯದಲ್ಲಿ ರಈಲ್ಸ್ ಆಯೋಜಿಸಲಾಗಿದೆ.
ಮೊಬೈಲ್ ಫೆÇೀನ್ ಮೂಲಕ ಚಿತ್ರೀಕರಿಸಿದ, ಗರಿಷ್ಠ ಮೂರು ನಿಮಿಷಗಳ ರೀಲ್ಸ್ ಸ್ಪರ್ಧೆಗೆ ಕಳುಹಿಸಿಕೊಡಬೇಕಾಗಿದೆ. ಗ್ರಾಫಿಕ್ಸ್‍ನಂತಹ ಇತರ ಎಡಿಟಿಂಗ್ ಕೆಲಸಗಳನ್ನು ಕಂಪ್ಯೂಟರ್ ಬಳಸಿ ಮಾಡಬಾರದು. ಹಿನ್ನೆಲೆ ಸಂಗೀತಕ್ಕೆ ಅನುಮತಿಯಿದೆ. ಭಾಗವಹಿಸುವ ಮಕ್ಕಳು ಮೂರು ನಿಮಿಷಕ್ಕೆ ಮೀರದ ರೀಲ್‍ಗಳನ್ನು ಸಿದ್ಧಪಡಿಸಬೇಕು ಮತ್ತು ಅಬ್ಯರ್ಥಿ ಹೆಸರು, ವಿಳಾಸ, ಫೆÇೀನ್ ನಂಬರ್, ಶಾಲೆಯ ಹೆಸರು ಮತ್ತು ತರಗತಿಯನ್ನು ಒಳಗೊಂಡಿರುವ ರೀಲ್‍ಗಳನ್ನು ಇ-ಮೇಲ್(ಜಛಿಠಿuಞsಜ5@gmಚಿiಟ.ಛಿom)ಮೂಲಕ ಕಳುಹಿಸಿಕೊಡಬೇಖು. ನ. 17 ರೀಲ್‍ಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 256990) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.