ಬದಿಯಡ್ಕ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ವಾಹನಕ್ಕೆ ಹಲ್ಲೆ ನಡೆಸಿದ ಘಟನೆಯನ್ನು ಕರಾಡ ಸಮಾಜ ಖಂಡಿಸುತ್ತದೆ ಎಂದು ರಾಜಾರಾಂ ಪೆರ್ಲ ತಿಳಿಸಿರುವರು.
ಶ್ರೀಗಳನ್ನು ಭೇಟಿ ಮಾಡಿದ ಕರಾಡ ಸಮಾಜದ ನಿಯೋಗದಲ್ಲಿ ಕರಾಡ ಬ್ರಾಹ್ಮಣ ಅಭ್ಯುದಯ ಸಂಘದ ಅಧ್ಯಕ್ಷ ರಮಾನಂದ ಎಡಮಲೆ, ಕೃಷ್ಣಮೂರ್ತಿ,ಎಡಪ್ಪಾಡಿ, ಶಿವಕೃಷ್ಣ ಭಟ್ ಬಳಕ್ಕ, ವಿಷ್ಣುಮೋಹನ ಐಲುಕುಂಜೆ,ಹರೀಶ್ ಚೇರ್ಕೂಡ್ಲು, ಸೀತಾರಾಂ ಭಟ್ ಮುಂಗಿಲ, ಉಪಸ್ಥಿತರಿದ್ದರು.