ಕಾಸರಗೋಡು: ಕೇಂದ್ರ ಹಾಗೂ ಕೇರಳ ಸರ್ಕಾರ ಸಹಕಾರಿ ಕ್ಷೇತ್ರದ ಸಂಪೂರ್ಣ ವ್ಯವಸ್ಥೆಯನ್ನು ಹಾಳುಮಾಡಲು ಯತ್ನಿಸುತ್ತಿರುವುದಾಗಿ ಡಿ.ಸಿ.ಸಿ. ಅಧ್ಯಕ್ಷ ಪಿ.ಕೆ.ಫೈಸಲ್ ಹೇಳಿದರು. ಅವರು ಕೇರಳ ಸಹಕಾರಿ ಒಕ್ಕೂಟ 9ನೇ ರಾಜ್ಯ ಸಮ್ಮೇಳನದ ಅಂಗವಾಗಿ ಕಾಸರಗೋಡು ನಗರಸಭಾಂಗಣ ಸನಿಹದ ಸಂಧ್ಯಾರಾಗಂ ತೆರೆದ ಸಭಾಂಗಣದ ನಡೆದ ಸಹಕಾರ ಕ್ಷೇತ್ರದ ವರ್ತಮಾನ ಮತ್ತು ಭವಿಷ್ಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ಕ್ಷೇತ್ರ ಹಿಂದೆಂದೂ ಕಾಣದಷ್ಟು ವಿಶ್ವಾಸಾರ್ಹತೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಎಂ.ವಿ.ರಾಘವನ್ ಅವರು ಸಹಕಾರಿ ಸಚಿವರಾದಾಗ ಸಹಕಾರಿ ಕ್ಷೇತ್ರಕ್ಕೆ ಉತ್ತಮ ಸಮಯ. ಆಗ ಸಹಕಾರಿ ಸಂಘದ ಸದಸ್ಯರು ತಾವು ಸಹಕಾರಿ ಕ್ಷೇತ್ರದ ಕಾರ್ಮಿಕರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಎಡರಂಗ ಸರ್ಕಾರದ ದೂರದೃಷ್ಟಿಯ ಕೊರತೆಯಿಂದ ಸಹಕಾರಿ ಇಲಾಖೆ ಮೇಲಿನ ವಿಶ್ವಾಸಾರ್ಹತೆ ನಾಶವಾಗಿರುವುದಾಘಿ ತಿಳಿಸಿದರು.
ಸಂಘಟನೆ ರಾಜ್ಯ ಸಮಿತಿ ಅಧ್ಯಕ್ಷ ಸಿ.ಎನ್.ವಿಜಯಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಶಿರೂರು ದುರಂತದಲ್ಲಿ ಅರ್ಜುನ್ ಹುಡುಕಾಟ ಕಾರ್ಯಾಚರಣೆ ಸಂದರ್ಭ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದ ಶಾಸಕ ಎಕೆಎಂ ಅಶ್ರಫ್ ಅವರನ್ನು ಸಿ.ಎನ್ ವಿಜಯಕೃಷ್ಣನ್ ಸನ್ಮಾನಿಸಿದರು. ಕೆ.ಎಸ್.ಎಫ್ ಪ್ರಧಾನ ಕಾರ್ಯದರ್ಶಿ ಎಂ.ಪಿ ಸಾಜು ವಿಷಯ ಮಂಡಿಸಿದರು. ವಿ.ಕೆ.ರವೀಂದ್ರನ್ ಸಮನ್ವಯಕಾರರಾಗಿದ್ದರು. ಕೆ.ವಿ.ಕೃಷ್ಣನ್, ಎ.ಗೋವಿಂದನ್ ನಾಯರ್, ಸಿ.ಎ.ಅಜೀರ್, ಕೆ.ಶ್ರೀಕಾಂತ್, ಸ್ವಾತಿಕುಮಾರ್, ಟಿ.ವಿ.ಉಮೇಶನ್ ಮತ್ತು ಟಿ.ಕೆ.ವಿನೋದ್ ಉಪಸ್ಥಿತರಿದ್ದರು.