ತಿರುವನಂತಪುರ: ನರೇಂದ್ರ ಮೋದಿ ಸರ್ಕಾರ ಹಾಗೂ ಕೇಂದ್ರ ಸಚಿವ ಜಾರ್ಜ್ ಕುರಿಯನ್ ಅವರನ್ನು ಸಚಿವ ಸಾಜಿ ಚೆರಿಯನ್ ಹೊಗಳಿ ಅಚ್ಚರಿಮೂಡಿಸಿದ್ದಾರೆ.
ಸಮುದ್ರದಲ್ಲಿ ಕೃತಕ ಬಂಡೆಗಳಲ್ಲಿ ಮೀನು ಮರಿಗಳನ್ನು ಇಡುವ ಮೀನುಗಾರಿಕೆ ಸಮುದ್ರ ಸಾಕಾಣಿಕೆ ಯೋಜನೆ ಉದ್ಘಾಟನೆ ಸಮಾರಂಭದಲ್ಲಿ ರಾಜ್ಯ ಮೀನುಗಾರಿಕೆ ಇಲಾಖೆ ನಿರ್ವಹಿಸುತ್ತಿರುವ ಸಾಜಿ ಚೆರಿಯನ್ ಅವರ ಮಾತುಗಳು ಅಚ್ಚರಿ ಮೂಡಿಸಿತು. ಕೇಂದ್ರ ಮೀನುಗಾರಿಕಾ ಖಾತೆ ರಾಜ್ಯ ಸಚಿವ ಜಾರ್ಜ್ ಕುರಿಯನ್ ಸಮಾರಂಭ ಉದ್ಘಾಟಿಸಿದರು.
ಕೇರಳದ ಅಭಿವೃದ್ಧಿಗೆ ಅನ್ಹುವ ಸಂಪೂರ್ಣ ಮಾರ್ಗವಾಗಿದೆ ಎಂದು ಸಾಜಿ ಚೆರಿಯನ್ ಹೇಳಿದರು. ಅಂಚುಟೆಂಗ್ ಯೋಜನೆಗೆ 176 ಕೋಟಿ ರೂಪಾಯಿ ನೆರವು ನೀಡಿರುವುದಕ್ಕೆ ಕೇಂದ್ರಕ್ಕೆ ಅಭಿನಂದನೆಗಳು. ರಾಜ್ಯಕ್ಕೆ ನೆರವಾಗುವ ಕೇಂದ್ರ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ಎಂದವರು ಪ್ರಶಂಶಿಸಿದರು.
ಜಾರ್ಜ್ ಕುರಿಯನ್ ಅವರ ಹೇಳಿಕೆ ಉತ್ತಮ ಆರಂಭ ಎಂದು ಸಾಜಿ ಚೆರಿಯನ್ ಹೇಳಿದರು. ಅವರು ತಿಳುವಳಿಕೆಯುಳ್ಳ ಸಚಿವರು. ಮಾಡಲು ಸಾಧ್ಯವಾದರೆ, ಅದು ಆಗುತ್ತದೆ. ಇಲ್ಲವಾದರೆ ಸಾಧ್ಯವಿಲ್ಲ ಎನ್ನುತ್ತಾರೆ. ಮಂತ್ರಿಗಳು ಹೀಗೆಯೇ ಇರಬೇಕು ಎಂದು ಸಾಜಿ ಚೆರಿಯನ್ ಹೇಳಿದರು.
ಹಿಂದಿನ ಕೇಂದ್ರ ಸಚಿವರು ದೊಡ್ಡ ಸಹಾಯ ಮಾಡಿದ್ದರು. ಅವರ ನಂತರ ಬಂದ ಜಾರ್ಜ್ ಕುರ್ಯಾನ್ ಅವರು ಮೂಡಲ್ ಪೋಜಿನಲ್ಲಿ ಅಪಘಾತಗಳಿಗೆ ಪರಿಹಾರ ಕಂಡುಕೊಂಡಿರುವುದು ಒಳಿತು. 167 ಕೋಟಿಗಳ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಾಮಾಣಿಕವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಸಾಜಿ ಚೆರಿಯನ್ ಹೇಳಿದರು.
ಕೇಂದ್ರ ಸರ್ಕಾರ ಕೇರಳವನ್ನು ನಿರ್ಲಕ್ಷಿಸುತ್ತಿದೆ ಎಂದು ಎಡಪಕ್ಷದ ಸಚಿವರು ನಿರಂತರವಾಗಿ ಹೇಳುತ್ತಿರುವ ಹೊತ್ತಿನಲ್ಲಿ ಸಾಜಿ ಚೆರಿಯನ್ ಹೊಗಳಿಕೆಯ ಸುರಿಮಳೆಗೈದಿದ್ದಾರೆ. ಕರಾವಳಿ, ಸಮುದ್ರದಲ್ಲಿ ಮೀನು ಸಂಪತ್ತು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಕೃತಕ ಕೆರೆಗಳÀಲ್ಲಿ ಮೀನು ಮರಿಗಳನ್ನು ಹೂಡುವ ಯೋಜನೆ ಆರಂಭಿಸಲಾಗಿದೆ. ವಿಝಿಂಜಂ ಉತ್ತರ ಬಂದರಿನಲ್ಲಿ ಕಾರ್ಯಕ್ರಮ ನಡೆಯಿತು.