ಪಾಂಡುರ್ನಾ: ಮಧ್ಯಪ್ರದೇಶದ ಪಾಂಡುರ್ನಾ ಜಿಲ್ಲೆಯಲ್ಲಿ ಬಾಲಕನನ್ನು ತಲೆಕೆಳಗೆ ಮಾಡಿ ನೇತು ಹಾಕಿದ ಮತ್ತು ಆತನ ತಲೆ ಸಮೀಪ ಬಿಸಿ ಕಲ್ಲಿದ್ದಲನ್ನು ಇಡುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ. ಈ ಬಗ್ಗೆ ಗೊತ್ತಾದ ಕೂಡಲೇ ಮೂವರನ್ನು ಬಂಧಿಸಿರುವುದಾಗಿ ಪೊಲೀಸರು ಸೋಮವಾರ ಹೇಳಿದ್ದಾರೆ.

ಜಿಲ್ಲಾ ಕೇಂದ್ರದಿಂದ 30 ಕಿ.ಮೀ ದೂರದಲ್ಲಿರುವ ಮೊಹಗಾಂವ್‌ನಲ್ಲಿ ಭಾನುವಾರ ಈ ಘಟನೆ ನಡೆದಿದೆ.
ಬಾಲಕನೊಬ್ಬನ ಕೈಗಳನ್ನು ಹಗ್ಗದಿಂದ ಕಟ್ಟಿ ಮತ್ತು ತಲೆಕೆಗಳಗಾಗಿ ನೇತುಹಾಕಿರುವ ಮತ್ತು ಆತ ಅಳುತ್ತಿದ್ದರೂ ಬಿಡದೆ, ತಲೆ ಬಳಿ ಬಿಸಿ ಕಲ್ಲಿದ್ದಲಿನ ತಟ್ಟೆಯನ್ನು ಇಟ್ಟಿರುವ ದೃಶ್ಯವೂ ವಿಡಿಯೊದಲ್ಲಿದೆ. ಅಲ್ಲದೆ ವ್ಯಕ್ತಿಯೊಬ್ಬ ಮತ್ತೊಬ್ಬ ಬಾಲಕನನ್ನೂ ಕಟ್ಟಿ ಹಾಕುತ್ತಿರುವ ದೃಶ್ಯವೂ ಅದರಲ್ಲಿ ದಾಖಲಾಗಿದೆ.
ಬಾಲಕನು ಕೈಗಡಿಯಾರ ಮತ್ತು ಇತರ ವಸ್ತುಗಳನ್ನು ಕದ್ದಿದ್ದ ಎಂದು ಜನರು ಆರೋಪಿಸಿರುವುದೂ ವಿಡಿಯೊದಲ್ಲಿದೆ.
ಬಂಧಿತ ಮೂವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪಾಂಡುರ್ನಾ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ಸಿಂಗ್ ಕನೇಶ್ ತಿಳಿಸಿದ್ದಾರೆ.
ಈ ಘಟನೆಯನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಕಮಲನಾಥ್, 'ಬಾಲಕನನ್ನು ಥಳಿಸಿ, ತಲೆಕೆಳಗೆ ನೇತು ಹಾಕಿರುವುದಲ್ಲದೇ ಬಲವಂತವಾಗಿ ಮೆಣಸಿನಕಾಯಿ ಹೊಗೆ ಸೇವಿಸುವಂತೆ ಮಾಡಲಾಗಿದೆ. ಇದು ಅತ್ಯಂತ ಖಂಡನೀಯ ಕೃತ್ಯ. ನಾಗರಿಕ ಸಮಾಜದಲ್ಲಿ ಈ ರೀತಿಯ ವರ್ತನೆಗಳು ಇರಬಾರದು. ಈ ಪ್ರಕರಣದ ತಪ್ಪಿತಸ್ಥರ ವಿರುದ್ಧ ಕಠಣ ಕ್ರಮ ಆಗಬೇಕು' ಎಂದು ಆಗ್ರಹಿಸಿದ್ದಾರೆ.
'ಸಣ್ಣ ವಿಷಯಗಳಿಗೆ ಮಕ್ಕಳನ್ನು ಈ ರೀತಿ ಕ್ರೂರವಾಗಿ ಶಿಕ್ಷಿಸುವುದು ಅಪಾಯಕಾರಿ. ಜನರು ಸಂಯಮ ಕಳೆದುಕೊಳ್ಳಬಾರದು' ಎಂದು ಅವರು ಕಿವಿಮಾತು ಹೇಳಿದ್ದಾರೆ.