ಬದಿಯಡ್ಕ : ಗಂಗಾಧರ ಆಳ್ವ ಸಾಂಸ್ಕೃತಿಕ ಪ್ರತಿಷ್ಠಾನ ವಳಮಲೆ ಬದಿಯಡ್ಕ ಇದರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನ. 6 ಬುಧವಾರ ಅಪರಾಹ್ನ 2 ಕ್ಕೆ ಬದಿಯಡ್ಕದ ವಳಮಲೆ ಇರಾ ಸಭಾ ಭವನದಲ್ಲಿ ನಡೆಯಲಿದೆ. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಗಂಗಾಧರ ಆಳ್ವ ಸಾಂಸ್ಕೃತಿಕ ಪ್ರತಿμÁ್ಠನದ ಅಧ್ಯಕ್ಷ ಗಂಗಾಧರ ಆಳ್ವ ಅಧ್ಯಕ್ಷತೆ ವಹಿಸುವರು. ಸಾಮಾಜಿಕ ಮುಖಂಡರಾದ ಕಲ್ಲಗ ಚಂದ್ರಶೇಖರ ರಾವ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಅಖಿಲೇಶ್ ನಗುಮುಗಂ , ಸಾಮಾಜಿಕ ಕಾರ್ಯಕರ್ತರಾದ ಜಯದೇವ ಖಂಡಿಗೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಗೋಪಾಲಕೃಷ್ಣ ಮುಂತಾದವರು ಕಾರ್ಯಕ್ರಮಕ್ಕೆ ಶುಭಹಾರೈಸಲಿರುವರು. ಸಾಮಾಜಿಕ ಮುಖಂಡರಾದ ತಾರಾನಾಥ ರೈ, ಸಮಾಜ ಸೇವಕ ಪ್ರತೀಕ್ ಆಳ್ವ, ಗಂಗಾಧರ ಆಳ್ವ ಸಾಂಸ್ಕೃತಿಕ ಪ್ರತಿμÁ್ಠನದ ಕೋಶಾಧಿಕಾರಿ ರಮೇಶ್ ಶೆಟ್ಟಿ ಗೌರೀಕ್ಕೋಡಿ , ಕೃಷ್ಣ ಡಿ ಬೆಳಿಂಜ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಗಂಗಾಧರ ಬಲ್ಲಾಳ್ ಅಡ್ವಳ , ಸಾಮಾಜಿಕ ಕಾರ್ಯಕರ್ತೆ ಆಯಿμÁ ಪೆರ್ಲ, ಜನಪ್ರಿಯ ವೈದ್ಯರಾದ ಡಾ. ಶ್ರೀನಿಧಿ ಸರಳಾಯ, ಯುವ ಸಂಘಟಕ ಅಶ್ವತ್ಥ್ ಪೂಜಾರಿ ಲಾಲ್ಬಾಗ್, ಯೋಗ ಶಿಕ್ಷಕಿ ತೇಜಕುಮಾರಿ ಎಂಬಿವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಪರಮೇಶ್ವರ ನಾಯ್ಕ್ ಅರ್ತಲೆ ಅವರ 12 ನೇ ಕೃತಿಯಾದ ಸ್ನೇಹಾಮೃತ ಎಂಬ ಕೃತಿಯನ್ನು ನಿವೃತ್ತ ಬ್ಯಾಂಕ್ ಪ್ರಬಂಧಕ ಟಿ. ಸುಬ್ರಾಯ ನಾಯ್ಕ್ ಬಿಡುಗಡೆಗೊಳಿಸಲಿರುವರು. ಕಾರ್ಯಕ್ರಮದಲ್ಲಿ ಜ್ಞಾನೇಶ್ವರಿ ಬಂಟರ ಬಳಗ ಬದಿಯಡ್ಕ ವತಿಯಿಂದ ಕನ್ನಡ ಗಾನಯಾನ ಮತ್ತು ಯೋಗ ಫಾರ್ ಕಿಡ್ಸ್ ಕಾಸರಗೋಡು ಸಂಸ್ಥೆ ವತಿಯಿಂದ ಯೋಗ ಪ್ರದರ್ಶನವು ನಡೆಯಲಿದೆ.